ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಬೀದಿ ನಾಯಿ ಕಚ್ಚಿದ್ದರಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ್ ಮೃತ ದುರ್ದೈವಿಯಾಗಿದ್ದಾನೆ.
ಶಿವಶಂಕರ್ ಅವರಿಗೆ ಸುಮಾರು 6 ತಿಂಗಳ ಹಿಂದೆ ಬೀದಿ ನಾಯಿ ಕಚ್ಚಿತ್ತು. ನಂತರ ಗಾಯದಿಂದ ಉಂಟಾದ ನಂಜು ಹೆಚ್ಚಾಗಿ, ಅವರು ಆಹಾರ ಮತ್ತು ನೀರನ್ನು ಸೇವಿಸುವುದನ್ನು ತ್ಯಜಿಸಿದ್ದರು. ಇದರ ಪರಿಣಾಮವಾಗಿ, ಅವರನ್ನು ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಯ ಫಲಕಾರಿಯಾಗದೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಸ್ಥಳೀಯರು ಮತ್ತು ಆರೋಗ್ಯ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣ ಮತ್ತು ರೇಬೀಸ್ ತಡೆಗಟ್ಟುವ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.