GSTಯಲ್ಲಿ ಭಾರೀ ಬದಲಾವಣೆ? GST ಸುಧಾರಣೆಯ ನಂತರ ಏನು ಅಗ್ಗವಾಗಬಹುದು?

GST : ದೇಶದ 79ನೇ ಸ್ವಾತಂತ್ರ್ಯ ದಿನಾಚಣೆ ಪ್ರಯುಕ್ತ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಬಿಗ್‌ ಗಿಫ್ಟ್‌ ನೀಡಿದರು. ಈ ದೀಪಾವಳಿಗೆ ದೇಶದ ಜನ ಡಬಲ್‌ ದೀಪಾವಳಿ…

GST vijayaprabha news

GST : ದೇಶದ 79ನೇ ಸ್ವಾತಂತ್ರ್ಯ ದಿನಾಚಣೆ ಪ್ರಯುಕ್ತ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಬಿಗ್‌ ಗಿಫ್ಟ್‌ ನೀಡಿದರು.

ಈ ದೀಪಾವಳಿಗೆ ದೇಶದ ಜನ ಡಬಲ್‌ ದೀಪಾವಳಿ ಆಚರಿಸ್ತಾರೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರ್ತಿದ್ದೇವೆ. ಬಹಳ ಪ್ರಮಾಣದಲ್ಲಿ ಜಿಎಸ್‌ಟಿಯನ್ನು ಕಡಿಮೆ ಮಾಡ್ತೀವಿ ಎಂದು ಮೋದಿ ಹೇಳಿದರು.

ಹೌದು, ವರದಿಗಳ ಪ್ರಕಾರ ಕೇಂದ್ರ ಸರ್ಕಾರವು GST ರಚನೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿದೆ ಮತ್ತು 5% & 18%ರ ಈ ಎರಡು ತೆರಿಗೆ ಸ್ಲ್ಯಾಬ್‌ಗಳನ್ನು ಶಿಫಾರಸು ಮಾಡಿದೆ ಅಂತ ಸರ್ಕಾರಿ ಮೂಲಗಳು ಹೇಳಿವೆ ಎಂದು ವರದಿಗಳು ತಿಳಿಸಿವೆ.

Vijayaprabha Mobile App free

GST ಸುಧಾರಣೆಯ ನಂತರ ಏನು ಅಗ್ಗವಾಗಬಹುದು?

ತಂಬಾಕು & ಪಾನ್ ಮಸಾಲಾದಂತಹ ವಸ್ತುಗಳಿಗೆ ಈಗ 40% GST ಇದ್ದು, ಸದ್ಯ ಬದಲಾವಣೆಗಳನ್ನು ಅಂತಿಮಗೊಳಿಸಲು ಈ ಪ್ರಸ್ತಾವನೆಯನ್ನು GST ಕೌನ್ಸಿಲ್‌ಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಜನರು ಬಳಸುವ ಹೆಚ್ಚಿನ ವಸ್ತುಗಳು 12% ಮತ್ತು 28% ಸ್ಲ್ಯಾಬ್‌ಗಳಿಂದ 5% ಸ್ಲ್ಯಾಬ್‌ಗೆ ಇಳಿಯಲಿವೆ. ಇವುಗಳಲ್ಲಿ ಬೆಣ್ಣೆ, ತುಪ್ಪ, ಪ್ಯಾಕ್ ಮಾಡಿದ ತಿಂಡಿಗಳು, ಫೋನ್‌ಗಳು, ತಿಂಡಿಗಳು, ಕಂಪ್ಯೂಟರ್‌ಗಳು, ಶೂಗಳು, ಬಟ್ಟೆಗಳು, ಕೃಷಿ ಉಪಕರಣಗಳು, ವಾಟರ್ ಹೀಟರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಇತ್ಯಾದಿಗಳು ಒಳಗೊಂಡಿರಬಹುದು.

ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ಬರುವುದಿಲ್ಲವೇ?

ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕಡಿಮೆ ಮಾಡುವ ಕೇಂದ್ರದ ಪ್ರಸ್ತಾವನೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತವೆಯೇ ಎಂದು ಹಲವರು ಕುತೂಹಲದಲ್ಲಿದ್ದಾರೆ. ಆದರೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧವಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ. ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ, ವ್ಯಾಟ್ ಮತ್ತು ಸೆಸ್ ಅನ್ನು ಸಂಗ್ರಹಿಸುತ್ತಿವೆ. ಒಟ್ಟಾರೆಯಾಗಿ, ತೆರಿಗೆಗಳು 50% ವರೆಗೆ ಇವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.