Actor Ajay Rao divorce : ಸೆಲೆಬ್ರಿಟಿ ವಲಯದಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಹಬ್ಬಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ (Ajay Rao) ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.

ಹೌದು, ನಟ ಅಜಯ್ ರಾವ್ & ಸ್ವಪ್ನಾ ರಾವ್ (Swapna Rao) 10 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ (Domestic violence) ಕೇಸ್ ದಾಖಲಿಸಿರುವ ಪತ್ನಿ, ವಿಚ್ಛೇದನ (divorce) ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಅಜಯ್ ರಾವ್ ಮತ್ತು ಸ್ವಪ್ನಾ ದಂಪತಿ ಬೇರಾಗುತ್ತಿದ್ದು, ಇಬ್ಬರ ವಿಚ್ಛೇದನಕ್ಕೆ ನಿಖರ ಕಾರಣಗಳು ಇನ್ನಷ್ಟೆ ತಿಳಿಯಬೇಕಿದೆ.

ಅಜಯ್ ರಾವ್ ಹಾಗೂ ಸಪ್ನಾ ಈ ಇಬ್ಬರೂ ಸಹ ಪ್ರೀತಿಸಿ 2014 ರಲ್ಲಿ ಹೊಸೇಪಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ ನಟನ ಬಾಳಲ್ಲಿ ಈಗ ವಿಚ್ಛೇದನದ ಬಿರುಗಾಳಿ ಬೀಸಿರುವುದು ಅವರ ಫ್ಯಾನ್ಸ್‌ಗೆ ಬೇಸರ ತರಿಸಿದೆ.




