ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಯೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಶಿಕ್ಷಕನೊಬ್ಬ ತನಗೆ ಕಿರುಕುಳ ನೀಡಿದ್ದಾನೆ. ಮತ್ತು ಬಲವಂತವಾಗಿ ಮದ್ಯಪಾನ ಮಾಡಲು ಒತ್ತಾಯಿಸಿದ್ದ ಎಂದು ಆರೋಪಿಸಿ ವೀಡಿಯೊವನ್ನು ಮಾಡಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂತಹ ಕಿರುಕುಳದಿಂದ “ಇನ್ನೂ ಅನೇಕ ಮಕ್ಕಳು ಸಾಯುತ್ತಾರೆ” ಎಂದು ಹುಡುಗ ಎಚ್ಚರಿಸಿರುವ ವೀಡಿಯೊವನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಜನವರಿ 22ರ ಬುಧವಾರದಂದು ಭೋಪಾಲ್ನಿಂದ 280 ಕಿ.ಮೀ. ದೂರದಲ್ಲಿರುವ ಕೋಲಾರಸ್ ರೈಲ್ವೆ ನಿಲ್ದಾಣದ ಬಳಿ ಬಾಲಕ ರೈಲು ಹಳಿಗಳ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ರೈಲು ಚಾಲಕ ತುರ್ತು ಬ್ರೇಕ್ ಹಾಕಿದರೂ, ವಿದ್ಯಾರ್ಥಿಯನ್ನು ತಪ್ಪಿಸಲು ಸಾಧ್ಯವಾಗಿಲ್ಲ. ನಂತರ ಆತನನ್ನು 170 ಕಿ. ಮೀ. ದೂರದಲ್ಲಿರುವ ಗ್ವಾಲಿಯರ್ನ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವಾಗ ಪೊಲೀಸರು ವೀಡಿಯೊವನ್ನು ಪತ್ತೆಹಚ್ಚಿದರು. ವರದಿಯ ಪ್ರಕಾರ, ಶಿಕ್ಷಕರೊಬ್ಬರು ವಿದ್ಯಾರ್ಥಿಗಳನ್ನು ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಅವರಿಂದ ಟ್ಯೂಷನ್ ಶಿಕ್ಷಣವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹುಡುಗ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಶಿಕ್ಷಕ ಮೃತ ವಿದ್ಯಾರ್ಥಿಗೆ ಕನಿಷ್ಠ ಒಂದು ಬಾರಿಯಾದರೂ ಬಿಯರ್ ಕುಡಿಯುವಂತೆ ಒತ್ತಾಯಿಸಿದ್ದ ಎಂದು ವೀಡಿಯೊ ಬಹಿರಂಗಪಡಿಸಿದೆ.
ಅವರಿಂದ ಪಾಠ ಕಲಿಯದಿದ್ದರೆ ಅವರಿಗೆ ಕಡಿಮೆ ಶ್ರೇಣಿಗಳನ್ನು ನೀಡುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಜಿಆರ್ಪಿ ಮತ್ತು ಕೋಲಾರಸ್ ಪೊಲೀಸರು ನಡೆಸುತ್ತಿದ್ದಾರೆ.