ಟೀಂ ಇಂಡಿಯಾಗೆ ಧೋನಿ ಕಂಬ್ಯಾಕ್..!; ಐಪಿಎಲ್‌ಗೆ ಗುಡ್‌ ಬೈ?

ಚೆನ್ನೈ ತಂಡಕ್ಕೆ ಹಲವು ಗೆಲುವು ಹಾಗೂ 4 IPL ಟ್ರೋಫಿಗಳನ್ನು ಗೆದ್ದು ಕೊಟ್ಟಿರುವ ಮಹೇಂದ್ರ ಸಿಂಗ್‌ ಧೋನಿ, 2023ರ ಐಪಿಎಲ್‌ ಬಳಿಕ ನಿವೃತ್ತಿಯಾಗಲಿದ್ದಾರೆ. ವರದಿಯ ಪ್ರಕಾರ, ಮುಂದಿನ ವರ್ಷ ಕೊನೆಯ ಐಪಿಎಲ್‌ ಆಡಲಿದ್ದಾರೆ ಎನ್ನಲಾಗಿದೆ.…

ಚೆನ್ನೈ ತಂಡಕ್ಕೆ ಹಲವು ಗೆಲುವು ಹಾಗೂ 4 IPL ಟ್ರೋಫಿಗಳನ್ನು ಗೆದ್ದು ಕೊಟ್ಟಿರುವ ಮಹೇಂದ್ರ ಸಿಂಗ್‌ ಧೋನಿ, 2023ರ ಐಪಿಎಲ್‌ ಬಳಿಕ ನಿವೃತ್ತಿಯಾಗಲಿದ್ದಾರೆ. ವರದಿಯ ಪ್ರಕಾರ, ಮುಂದಿನ ವರ್ಷ ಕೊನೆಯ ಐಪಿಎಲ್‌ ಆಡಲಿದ್ದಾರೆ ಎನ್ನಲಾಗಿದೆ. ಧೋನಿಯ ಅನುಭವವನ್ನು ಟೀಂ ಇಂಡಿಯಾದಲ್ಲಿ ಬಳಸಿಕೊಳ್ಳಲು ಮುಂದಾಗಿದ್ದೇವೆ ಎಂದು ಬಿಸಿಸಿಐ ಹೇಳಿದೆ.

ಹೌದು, ಟಿ20 ವಿಶ್ವಕಪ್‌ನಲ್ಲಿ ಭಾರೀ ಸೋಲಿನ ನಂತರ ಟೀಂ ಇಂಡಿಯಾ ಬಗ್ಗೆ ಅಪಾರ ಟೀಕೆಗಳು ವ್ಯಕ್ತವಾಗಿವೆ. ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ಎಂ. ಎಸ್ ಧೋನಿಗೆ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಅನುಭವ ಇದೆ. ಹಾಗಾಗಿ ಧೋನಿ ಮತ್ತೆ ಟೀಂ ಇಂಡಿಯಾಗೆ ಮರಳಿ ಮಾರ್ಗದರ್ಶನ ನೀಡಬೇಕು ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯು(ಬಿಸಿಸಿಐ) ಬಯಸುತ್ತದೆ ಎಂದಿದೆ. ಅದೇ ವರದಿಯು, 2023 ರ ಐಪಿಎಲ್‌ ಬಳಿಕ ಧೋನಿ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.