WPL Mini Auction | WPL ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ

WPL mini auction : ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೋಲ್ಡ್ ಆಗಿದ್ದಾರೆ. ಹುದು,…

WPL mini auction

WPL mini auction : ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೋಲ್ಡ್ ಆಗಿದ್ದಾರೆ.

ಹುದು, ಒಟ್ಟು 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೋಲ್ಡ್ ಆಗಿದ್ದು, ನಾಲ್ವರು ಆಟಗಾರ್ತಿಯರು ಒಂದು ಕೋಟಿ ರೂ. ಅಧಿಕ ಬೆಲೆಗೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅನ್‌ಕ್ಯಾಪ್ಡ್ ಭಾರತೀಯರಾದ ಸಿಮ್ರಾನ್ ಶೇಖ್​ 1. 90 ಕೋಟಿ ರೂ. ಗುಜರಾತ್ ಜೈಂಟ್ಸ್​​ ತಂಡದ ಪಾಲಾಗಿದ್ದಾರೆ. 16 ವರ್ಷದ ಜಿ ಕಮಲಿನಿ 1.60 ಕೋಟಿ ರೂ ಮುಂಬೈ ಇಂಡಿಯನ್ಸ್ ಸೇರಿದ್ದು, ಪ್ರೇಮಾ ರಾವತ್ 1.2 ಕೋಟಿ ರೂ RCB ತಂಡದ ಪಾಲಾಗಿದ್ದಾರೆ.

WPL Auction

Vijayaprabha Mobile App free

WPL mini auction : ಯುವ ಆಟಗಾರ್ತಿಯರಿಗೆ ಜಾಕ್ ಪಾಟ್..

WPL ಹರಾಜಿನಲ್ಲಿ ಭಾರತದ ಆಟಗಾರ್ತಿಯರಾದ ಸಿಮ್ರಾನ್ ಶೇಖ್, ಕಮಲಿನಿ ಅವರಿಗೆ ಜಾಕ್ ಪಾಟ್ ಹೊಡೆದಿದೆ.  ಹರಾಜಿನಲ್ಲಿ ಸಿಮ್ರಾನ್ ಅವರನ್ನು ಗುಜರಾತ್ ಜೈಂಟ್ಸ್ ₹1.9 ಕೋಟಿಗೆ ಖರೀದಿಸಿದೆ. ಮತ್ತೊಂದೆಡೆ ಕಮಲಿನಿ ಅವರನ್ನು ಮುಂಬೈ ₹1.6 ಕೋಟಿಗೆ ಪಡೆದುಕೊಂಡಿದೆ. ಸಿಮ್ರಾನ್ ಬ್ಯಾಟರ್ ಆಗಿದ್ದರೆ, 16 ವರ್ಷದ ಕಮಲಿನಿ ವಿಕೆಟ್ ಕೀಪರ್, ಬ್ಯಾಟರ್ ಎಂಬುದು ಗಮನಾರ್ಹ. 23ರ ಪ್ರೇಮ್ ರಾವತ್ ಅವರನ್ನು RCB ₹1.2 ಕೋಟಿಗೆ ಪಡೆದುಕೊಂಡಿದೆ. ಹರಾಜಿನಲ್ಲಿ ಸಿಮ್ರಾನ್ ಅತಿ ಹೆಚ್ಚು ದರ ಪಡೆದಿದ್ದಾರೆ.

WPL mini auction :  ಆರ್‌ಸಿಬಿ ಮಹಿಳಾ ತಂಡಕ್ಕೆ 4 ಆಟಗಾರ್ತಿಯರ ಎಂಟ್ರಿ..!

RCBಈ ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು

  • ಪ್ರೇಮಾ ರಾವತ್ – ರೂ 1.2 ಕೋಟಿ ರೂ.
  • ಜೋಶಿತಾ ವಿಜೆ – 10 ಲಕ್ಷ ರೂ.
  • ರಾಘ್ವಿ ಬಿಸ್ಟ್ – ರೂ 10 ಲಕ್ಷ ರೂ.
  • ಜಾಗರವಿ ಪವಾರ್ – 10 ಲಕ್ಷ ರೂ

RCBಯ ರಿಟೈನ್ ಆಟಗಾರ್ತಿಯರು:

ಸ್ಮೃತಿ ಮಂಧಾನ , ಸೋಫಿ ಡಿವೈನ್, ಎಲ್ಲಿಸ್ ಪೆರಿ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭಾನಾ, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನಕ್ಸ್, ಡೇನಿಯಲ್ ವ್ಯಾಟ್.

WPL mini auction :  ಮುಂಬೈ ಇಂಡಿಯನ್ಸ್​​ ಮತ್ತು ಗುಜರಾತ್ ಜೈಂಟ್ಸ್ ತಂಡದ ಆಟಗಾರ್ತಿಯರು..!

ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿಯರು

  • ಜಿ ಕಮಲಿನಿ – ರೂ 1.60 ಕೋಟಿ ರೂ.
  • ನಡಿನ್ ಡಿ ಕ್ಲರ್ಕ್ – ರೂ 30 ಲಕ್ಷ ರೂ.
  • ಅಕ್ಷಿತಾ ಮಹೇಶ್ವರಿ – 20 ಲಕ್ಷ ರೂ.
  • ಸಂಸ್ಕೃತಿ ಗುಪ್ತಾ – ರೂ 10 ಲಕ್ಷ ರೂ.

ಗುಜರಾತ್ ಜೈಂಟ್ಸ್​ ತಂಡ ಖರೀದಿಸಿದ ಆಟಗಾರ್ತಿಯರು:

  • ಸಿಮ್ರಾನ್ ಶೇಖ್ – 1.90 ಕೋಟಿ ರೂ.,
  • ಡಿಯಾಂಡ್ರಾ ಡಾಟಿನ್ – 1.70 ಕೋಟಿ ರೂ.,
  • ಡೇನಿಯಲ್ ಗಿಬ್ಸನ್ – 30 ಲಕ್ಷ ರೂ.
  • ಪ್ರಕಾಶಿಕಾ ನಾಯಕ್ – 10 ಲಕ್ಷ ರೂ.

WPL mini auction : ದೆಹಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಜ್​ ತಂಡದ ಆಟಗಾರ್ತಿಯರು!

ದೆಹಲಿ ಕ್ಯಾಪಿಟಲ್ಸ್​​ ತಂಡ ಖರೀದಿಸಿದ ಆಟಗಾರ್ತಿಯರು

  • ಎನ್ ಚರಣಿ – ರೂ 55 ಲಕ್ಷ ರೂ.
  • ನಂದಿನಿ ಕಶ್ಯಪ್ – ರೂ 10 ಲಕ್ಷ ರೂ.
  • ಸಾರಾ ಬ್ರೈಸ್ – ರೂ 10 ಲಕ್ಷ ರೂ.
  • ನಿಕಿ ಪ್ರಸಾದ್ – ರೂ 10 ಲಕ್ಷ

ಯುಪಿ ವಾರಿಯರ್ಜ್​ ತಂಡ ಖರೀದಿಸಿದ ಆಟಗಾರ್ತಿಯರು

  • ಅಲಾನಾ ಕಿಂಗ್ – 30 ಲಕ್ಷ ರೂ.
  • ಅರುಷಿ ಗೋಸ್ – ರೂ 10 ಲಕ್ಷ ರೂ.
  • ಕ್ರಾಂತಿ ಗೌಡ್ – ರೂ 10 ಲಕ್ಷ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply