Savings Schemes : ಹಣ ಉಳಿತಾಯ ಮಾಡಲುಪೋಸ್ಟ್ ಆಫೀಸ್ ಉಳಿತಾಯ ಖಾತೆ, ಮಾಸಿಕ ಆದಾಯ ಯೋಜನೆ, ಪಿಪಿಎಫ್ ಸೇರಿದಂತೆ ಸರ್ಕಾರದ ಅತ್ಯುತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ
ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post Office Savings Account)
ಈ ಯೋಜನೆಯಲ್ಲಿ ನೀವು ಕನಿಷ್ಠ 500 ರೂ. ಹೂಡಿಕೆ ಮಾಡಬಹುದಾಗಿದೆ. ಖಾತೆಯಲ್ಲಿ ಕನಿಷ್ಠ 500 ರೂ.ಗಳನ್ನು ಉಳಿಸಿಕೊಳ್ಳಲು ವಿಫಲವಾದರೆ ಅಥವಾ ಖಾತೆಯ ಬ್ಯಾಲೆನ್ಸ್ ಶೂನ್ಯವನ್ನು ತಲುಪಿದರೆ ಖಾತೆಯನ್ನು ಮುಚ್ಚಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕ ಶೇ.4 ಬಡ್ಡಿದರ ಸಿಗುತ್ತದೆ.
ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ (National Savings Time Deposit)
ಕನಿಷ್ಠ 1000ರೂ. ಠೇವಣಿಯೊಂದಿಗೆ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ಗರಿಷ್ಠ ಮಿತಿ ಎ೦ಬುದೇ ಇಲ್ಲ. ಬಡ್ಡಿಯು ಒ೦ದು ವರ್ಷದ ಅವಧಿಯ ಠೇವಣಿಯ ಮೇಲೆ ಶೇಕಡಾ 6.9, ಎರಡು ವರ್ಷಗಳ ಅವಧಿಯ ಮೇಲೆ ಶೇಕಡಾ 7, ಮೂರು ವರ್ಷಗಳ ಅವಧಿಯ ಮೇಲೆ ಶೇಕಡಾ 710 ರಷ್ಟು ಬಡ್ಡಿಯನ್ನು ನಿಯಮಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ: Agricultural loan | RBIನಿಂದ ಭರ್ಜರಿ ಗುಡ್ ನ್ಯೂಸ್; ₹2 ಲಕ್ಷ ಕೃಷಿ ಸಾಲ
ಐದು ವರ್ಷಗಳ RD ಯೋಜನೆ (RD Schemes)
ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಕನಿಷ್ಠ 100 ರೂ. ಠೇವಣಿ ಮಾಡಿ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಪ್ರಸ್ತುತ 6.7 ಶೇಕಡಾ ಬಡ್ಡಿ ಸಿಗುತ್ತದೆ.
ಮಾಸಿಕ ಆದಾಯ ಯೋಜನೆ (Monthly Income Scheme)
ಈ ಯೋಜನೆಯಲ್ಲಿ ಹೂಡಿಕೆದಾರರು ಮಾಸಿಕ ಆದಾಯವನ್ನು ಪಡೆಯಬಹುದು. ಒ೦ದೇ ಖಾತೆಯಡಿ ಕನಿಷ್ಠ 1000ರೂ ಹಾಗೂ ಗರಿಷ್ಠ 9 ಲಕ್ಷರೂ ಹಾಗೂ ಜಂಟಿ ಖಾತೆಯಡಿ ಗರಿಷ್ಠ 15 ಲಕ್ಷ ರೂಗಳನ್ನು ಹೂಡಿಕೆ ಮಾಡಬಹುದಾಗಿದ್ದು, ಖಾತೆ ತೆರೆದಾಗಿನಿಂದ ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಬರುತ್ತದೆ. ಇದರ ಬಡ್ಡಿ ದರ ಶೇ.7.40ರಷ್ಟನ್ನು ನಿಗದಿ ಮಾಡಲಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate)
ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ 1000ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಯು ಯಾವುದೇ ಮೊತ್ತವಾಗಿರಬಹುದು ಅದಕ್ಕೆ ಮಿತಿ ಇಲ್ಲ. ವಾರ್ಷಿಕ ಬಡ್ಡಿ ದರ ಶೇ.7.70ರಷ್ಟಿದೆ.
ಇದನ್ನೂ ಓದಿ: One Nation One Election ಕೇಂದ್ರ ಸಂಪುಟ ಗ್ರೀನ್ಸಿಗ್ನಲ್; ಮೋದಿ ಕಲ್ಪನೆಯ ಒಂದು ರಾಷ್ಟ್ರ ಒಂದು ಚುನಾವಣೆ ಲಾಭವೇನು?
ಪಿಪಿಎಫ್ (PPF)
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಒ೦ದು ವರ್ಷದಲ್ಲಿ ಕನಿಷ್ಠ ಮೊತ್ತ 500ರೂ. ಮತ್ತು ಗರಿಷ್ಟ 1,50,000 ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಶೇಕಡಾ 7.71ರಷ್ಟು ಬಡ್ಡಿ ದರ ಸಿಗುತ್ತದೆ.
ಕಿಸಾನ್ ವಿಕಾಸ್ ಪತ್ರ (Kisan Vikas Patra)
ಈ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ಕನಿಷ್ಠ 1000 ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ನೀವು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಬಡ್ಡಿ ದರ 7.50 ಪ್ರತಿಶತದಷ್ಟಿದೆ.