Ration card: ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಜೂನ್ 30ರವರೆಗೆ ಅವಕಾಶ.. ಈಗಲೇ ಪೂರ್ಣಗೊಳಿಸಿ!

link Aadhaar Card with Ration Card : ಪಡಿತರ ಚೀಟಿದಾರರಿಗೆ (Ration card holder) ಎಚ್ಚರಿಕೆ. ತಕ್ಷಣವೇ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (link Aadhaar Card with a…

Ration card

link Aadhaar Card with Ration Card : ಪಡಿತರ ಚೀಟಿದಾರರಿಗೆ (Ration card holder) ಎಚ್ಚರಿಕೆ. ತಕ್ಷಣವೇ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (link Aadhaar Card with a Ration Card) ಮಾಡಿ. ಇಲ್ಲದಿದ್ದರೆ ಮುಂದೆ ತೊಂದರೆಯಾಗುತ್ತದೆ. ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ (link Aadhaar Card with a Ration Card) ಮಾಡುವ ಗಡುವನ್ನು ಇನ್ನೂ ಮೂರು ತಿಂಗಳು ವಿಸ್ತರಿದ್ದು ಗೊತ್ತೇ ಇದೆ. ಆದರೆ ಈ ಗಡುವು ಕೂಡ ಸಮೀಪಿಸುತ್ತಿದ್ದು, ಜೂನ್ 30 ರವರೆಗೆ ಅವಕಾಶವಿದೆ.

ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಲಿಂಕ್ (link Aadhaar Card with a Ration Card)ಮಾಡಬೇಕು. ಒಂದು ವೇಳೆ ಲಿಂಕ್ ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ಕೆಲಸ ಮಾಡದಿರಬಹುದು ಎಂಬ ಊಹಾಪೋಹಗಳಿವೆ. ಬಹುತೇಕ ಪಡಿತರ ಅಂಗಡಿಗಳಲ್ಲಿ ಆಧಾರ್ ದೃಢೀಕರಣದ (Aadhaar authentication) ಮೂಲಕ ಸರಕುಗಳನ್ನು ನೀಡುತ್ತಿರುವುದು ಈಗಾಗಲೇ ಗೊತ್ತಾಗಿದೆ. ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಇನ್ನೂ ಯಾರಾದರೂ ಆಧಾರ್ ಮತ್ತು ಪಡಿತರ ಚೀಟಿ ಲಿಂಕ್ ಮಾಡದಿದ್ದಲ್ಲಿ, ತಕ್ಷಣ ಅದನ್ನು ಮಾಡುವುದು ಉತ್ತಮ.

ಇದನ್ನು ಓದಿ:  ಪ್ರಧಾನಿ ಮೋದಿಯಿಂದ ರೈತರಿಗೆ ಮತ್ತೊಂದು ವರದಾನ, ಖಾತೆಗೆ 15 ಲಕ್ಷ ರೂ; ಅರ್ಜಿ ಸಲ್ಲಿಸುವುದು ಹೇಗೆ..?

Vijayaprabha Mobile App free

ಪಡಿತರ ಚೀಟಿಯ ಪ್ರಾಮುಖ್ಯತೆ ಮತ್ತು ಉಪಯೋಗ – Importance and Use of Ration Card

Ration card
link Aadhaar Card with Ration Card
  • ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದು ಎಂದು ಪರಿಗಣಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ (Subsidy) ದರದಲ್ಲಿ ಅಕ್ಕಿ, ಗೋಧಿ ಮತ್ತು ಸೀಮೆಎಣ್ಣೆ ನೀಡುತ್ತವೆ.
  • ಪಾಸ್‌ಪೋರ್ಟ್ ಮತ್ತು ಪ್ಯಾನ್ ಕಾರ್ಡ್‌ನಂತೆ ಪಡಿತರ ಚೀಟಿಯೂ ಪ್ರಮುಖ ದಾಖಲೆಯಾಗಿದೆ. ಈಗಲೂ ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿ ಬಳಸಲಾಗುತ್ತಿದೆ.
  • ಆಧಾರ್ ಹೊಂದಿದ್ದರೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಪಡಿತರ ಚೀಟಿ ಹೊಂದಿರಬೇಕು. ಕಾರ್ಡ್‌ನಲ್ಲಿ ವಿವರಗಳು ಸರಿಯಾಗಿದ್ದವರಿಗೆ ಮಾತ್ರ ಕಲ್ಯಾಣ ಯೋಜನೆಗಳನ್ನು ನೀಡಲಾಗುತ್ತದೆ.
  • ಪಡಿತರ ಚೀಟಿಗೆ ಆಧಾರ್ ಲಿಂಕ್ (Aadhaar Link to Ration Card) ಮಾಡುವ ಮೂಲಕ ಪಡಿತರ ವಂಚನೆಗಳನ್ನು ಪರಿಶೀಲಿಸಬಹುದು. ಇದು ಒಂದೇ ವ್ಯಕ್ತಿಯು ಹಲವಾರು ಕಾರ್ಡ್‌ಗಳನ್ನು ಪಡೆಯುವುದನ್ನು ತಡೆಯುತ್ತದೆ. ನಕಲಿ ಪಡಿತರ ಚೀಟಿಗಳನ್ನು ತಡೆಯಬಹುದು. ಇದರಿಂದ ನಿಜವಾದ ಅರ್ಹರಿಗೆ ಅನುಕೂಲವಾಗಲಿದೆ.

ಇದನ್ನು ಓದಿ: ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ.. ಈ ಐದು ಯೋಜನೆಗಳಿಂದ ಸೂಪರ್ ಲಾಭ..!

ಆನ್‌ಲೈನ್‌ನಲ್ಲಿ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಹೇಗೆ? – link Aadhaar Card with a Ration Card Online

  • ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಬಯಸುವವರು ಮೊದಲು ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಆನ್‌ಲೈನ್ ಪೋರ್ಟಲ್‌ಗೆ ಹೋಗಬೇಕು.
  • ಆಧಾರ್ ಸಂಖ್ಯೆಯೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಸಲ್ಲಿಸು ಬಟನ್ ಒತ್ತಿರಿ.
  • ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿದ ನಂತರ ನಿಮ್ಮ ವಿನಂತಿಯನ್ನು ಕಳುಹಿಸಲಾಗುತ್ತದೆ
  • ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು SMS ದೃಢೀಕರಣ ಸಂದೇಶವು ಕಾಣಿಸಿಕೊಳ್ಳುತ್ತದೆ.

ಆಫ್‌ಲೈನ್‌ನಲ್ಲಿ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?- link Aadhaar Card with a Ration Card Offline

  • ಪಡಿತರ ಕಚೇರಿ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಥವಾ ಪಡಿತರ ಅಂಗಡಿಗಳಿಗೆ ಪಡಿತರ ಚೀಟಿ, ಕುಟುಂಬದ ಸದಸ್ಯರ ಆಧಾರ್ ಜೆರಾಕ್ಸ್, ಬ್ಯಾಂಕ್ ಖಾತೆ ಜೆರಾಕ್ಸ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇತ್ಯಾದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡ್ಕ್ ಹೋಗಿ
  • ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು PDS/ಪಡಿತರ ಅಂಗಡಿಗೆ ಸಲ್ಲಿಸಿ
  • ನಿಮ್ಮ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಲು, PDS/ಪಡಿತರ ಅಂಗಡಿ ಪ್ರತಿನಿಧಿಯು ಫಿಂಗರ್‌ಪ್ರಿಂಟ್ ದೃಢೀಕರಣವನ್ನು ತೆಗದುಕೊಳ್ಳುತ್ತಾರೆ
  • ದಾಖಲೆಗಳನ್ನು ಸಲ್ಲಿಸಿದ ನಂತರ ಮತ್ತು ಪ್ರಕ್ರಿಯೆಯು ಪ್ರಾರಂಭವಾದ ನಂತರ ನಿಮಗೆ SMS ಮೂಲಕ ಸೂಚಿಸಲಾಗುತ್ತದೆ.
  • ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಯೊಂದಿಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ತಿಳಿಸುವ ಮತ್ತೊಂದು SMS ಅನ್ನು ನೀವು ಸ್ವೀಕರಿಸುತ್ತೀರಿ

ಇದನ್ನು ಓದಿ: ಕೇಂದ್ರದಿಂದ ಶುಭ ಸುದ್ದಿ; ಇನ್ನು ಮುಂದೆ ಎರಡನೇ ಮಗು ಹೆಣ್ಣಾಗಿ ಜನಿಸಿದರೆ 6000 ರೂ..!

English Summary: June 30 is the last date for linking Aadhaar with ration card. Importance and Use of Ration Card. How to Link Ration Card with Aadhaar Number? Let’s see that

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: 38,480 ಹುದ್ದೆಗಳ ಬೃಹತ್ ನೇಮಕಾತಿ; SSLC, ಪಿಯುಸಿ, ಐಟಿಐ, ಪದವಿ ಆದವರಿಗೆ ಅವಕಾಶ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.