IPL Mega Auction 2025 RCB buys : ಮೊದಲ ದಿನ 6 ಆಟಗಾರರನ್ನು ಖರೀದಿಸಿದ ಆರ್‌ಸಿಬಿ …!

IPL Mega Auction 2025 RCB buys : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿಐಪಿಎಲ್ 2025 ರ ಮೆಗಾ ಹರಾಜು‌ ನಡೆಯುತ್ತಿದ್ದು, 2025ರ ಐಪಿಎಲ್ ಮೇಗಾ ಹರಾಜಿನಲ್ಲಿ ಆರ್‌ಸಿಬಿ 6 ಆಟಗಾರರನ್ನು ಖರೀದಿಸಿದ್ದು,89.35 ಕೋಟಿ…

IPL Mega Auction 2025 RCB buys

IPL Mega Auction 2025 RCB buys : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿಐಪಿಎಲ್ 2025 ರ ಮೆಗಾ ಹರಾಜು‌ ನಡೆಯುತ್ತಿದ್ದು, 2025ರ ಐಪಿಎಲ್ ಮೇಗಾ ಹರಾಜಿನಲ್ಲಿ ಆರ್‌ಸಿಬಿ 6 ಆಟಗಾರರನ್ನು ಖರೀದಿಸಿದ್ದು,89.35 ಕೋಟಿ ರೂ ಹಣವನ್ನು ಬಳಿಸಿದೆ. ಆರ್‌ಸಿಬಿ ಬಳಿ 30.65 ಕೋಟಿ ರೂ ಹಣವನ್ನು ಉಳಿಸಿಕೊಂಡಿದ್ದು ನಾಳೆ ಯಾವೇಲ್ಲ ಆಟಗಾರರನ್ನು ಖರೀದಿಸಲಿದೆ ಎಂದು ನೋಡಬೇಕಿದೆ.

IPL Mega Auction 2025 RCB buys Josh Hazlewood : ಆಸ್ಟ್ರೇಲಿಯಾದ ವೇಗದ ಬೌಲರ್ ಗೆ ಮಣೆ ಹಾಕಿದ RCB

IPL Mega Auction 2025 RCB buys Josh Hazlewood

2025ರ ಮೆಗಾ ಹರಾಜು ನಡೆಯುತ್ತಿದ್ದು, ಆಸ್ಟ್ರೇಲಿಯಾದ ವೇಗದ ಬೌಲರ್ ಆದ ಜೋಶ್ ಹೇಜಲ್ ವುಡ್ ನನ್ನು 12.50 ಕೋಟಿ ರೂ.ಗೆ ಆರ್‌ಸಿಬಿ ಖರೀದಿಸಿದೆ. ಎರಡು ಕೋಟಿ ರೂಪಾಯಿ ಮೂಲ ಬೆಲೆಗಳೊಂದಿಗೆ ಹರಾಜಿಗೆ ಬಂದಿದ್ದ ಅವರು ಈ ಬಾರಿ ಆರ್ಸಿಬಿ ತಂಡಕ್ಕೆ ಆಡಲಿದ್ದಾರೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಎದುರಾಳಿಗಳಿಗೆ ಕಾಡ ಬಲ್ಲ ಕ್ಷಮತೆಯನ್ನು ಗುರುತಿಸಿ ಆರ್‌ಸಿಬಿ ಇವರಿಗೆ ಮಣೆ ಹಾಕಿದೆ.

Vijayaprabha Mobile App free

ಇದನ್ನೂ ಓದಿ: Rishabh Pant । ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಪಂತ್‌: ಬರೋಬ್ಬರಿ 27 ಕೋಟಿಗೆ ಲಕ್ನೋ ಸೂರ್‌ ಜೈಟ್ಸ್‌ ಖರೀದಿ

IPL Mega Auction 2025 RCB buys Livingstone : RCB ಪಾಲಾದ ಲಿವಿಂಗ್ ಸ್ಟೋನ್

IPL Mega Auction 2025 RCB buys Livingstone

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರ ಲಿವಿಂಗ್ ಸ್ಟೋನ್ ಅವರನ್ನು RCB 8.75 ಕೋಟಿ ರೂ.ಗೆ ಖರೀದಿಸಿದೆ. 2 ಕೋಟಿ ಮೂಲ ಮೊತ್ತದೊಂದಿಗೆ ಹರಾಜಿನಲ್ಲಿ ಬಂದ ಈ ಸ್ಟಾರ್ ಬ್ಯಾಟ್ಸ್‌ಮನ್‌ಗಾಗಿ ಚೆನ್ನೈ, ಬೆಂಗಳೂರು ಮತ್ತು ದೆಹಲಿ ತಂಡದವರು ಪೈಪೋಟಿ ನಡೆಸಿದರು. ಅಂತಿಮವಾಗಿ ಬೆಂಗಳೂರು ಫ್ರಾಂಚೈಸಿ 8.75 ಕೋಟಿಗೆ ಖರೀದಿ ಮಾಡಿತು.

ಇದನ್ನೂ ಓದಿ: Jose Butler | 15.75 ಕೋಟಿಗೆ ಗುಜರಾತ್ ಪಾಲಾದ ಬಟ್ಲರ್

IPL Mega Auction 2025 RCB buys Philip Salt : RCBಗೆ ಎಂಟ್ರಿ ಕೊಟ್ಟ ಫಿಲಿಪ್ ಸಾಲ್ಟ್..!

IPL Mega Auction 2025 RCB buys Philip Salt

2025ರ ಮೆಗಾ ಹರಾಜಿನಲ್ಲಿ RCB ತಂಡಕ್ಕೆ ಇಂಗ್ಲೆಂಡ್ ತಂಡದ ಮತ್ತೊಬ್ಬ ಆಟಗಾರನನ್ನು 11.50 ಕೋಟಿ ರೂ.ಗೆ RCB ಬಿಡ್ ಮಾಡಿದೆ. ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಹಾಗೂ ವಿಕೆಟ್ ಕೀಪರ್ ಆಗಿರುವ ಫಿಲಿಪ್ ಸಾಲ್ಟ್ ಈ ಬಾರಿ ಆರ್ಸಿಬಿ ತಂಡದಲ್ಲಿ ಆಡಲಿದ್ದಾರೆ. ಇವರು ಎರಡು ಕೋಟಿಯ ಮೂಲ ಬೆಲೆಗಳೊಂದಿಗೆ ಹರಾಜಿಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬೆಲ; Shreyas Iyer 26.75 ಕೋಟಿಗೆ ಖರೀದಿಸಿದ ಪಂಜಾಬ್ ಕಿಂಗ್ಸ್

ಜಿತೇಶ್ ಶರ್ಮಾಗೆ ಗಾಳ ಹಾಕಿದ ಆರ್‌ಸಿಬಿ..!

IPL Mega Auction 2025 RCB buys Jitesh Sharma

ಭಾರತದ ಸ್ಟಾರ್ ಯುವ ಆಟಗಾರ ಹಾಗೂ ವಿಕೆಟ್ ಕೀಪರ್ ಆಗಿರುವ ಜಿತೇಶ್ ಶರ್ಮಾ ಅವರನ್ನು 2025ರ ಮೆಗಾ ಹರಾಜಿನಲ್ಲಿ ಖರೀದಿಸಿದೆ. ಆರ್‌ಸಿಬಿ 11 ಕೋಟಿ ರೂ.ಗಳಿಗೆ ಬಿಡ್ ಮಾಡಿದ್ದು, ವಿಕೆಟ್‌ಕೀಪರ್ ಹುಡುಕಾಟದಲ್ಲಿದ ಆರ್‌ಸಿಬಿಗೆ ಜಿತೇಶ್ ಶರ್ಮಾ ಉತ್ತಮ ಆಯ್ಕೆಯಾಗಿದ್ದಾರೆ. ಕಳೆದ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಐಪಿಎಲ್‌ನಲ್ಲಿ 40 ಪಂದ್ಯಗಳನ್ನು ಆಡಿರುವ ಜಿತೇಶ್ ಶರ್ಮಾ 22.81 ರ ಸರಾಸರಿಯಲ್ಲಿ 730 ರನ್‌ಗಳಿಸಿದ್ದಾರೆ.

2025ರ ಐಪಿಲೆ ಮೇಗಾ ಹರಾಜು: ಆರ್‌ಸಿಬಿಗೆ 5ನೇ ಆಟಗಾರನ ಆಗಮನ..!

IPL Mega Auction 2025 RCB buys Rasikdar

2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಯೂ 2025ರ ಐಪಿಎಲ್‌ಗಾಗಿ 5ನೇ ಆಟಗಾರನನ್ನು ಖರೀದಿಸಿದೆ. ಈ ಸಿಸನ್‌ 5ನೇ ಆಟಗಾರನಾಗಿ ಟೀಂ ಇಂಡಿಯಾದ ಯುವ ವೇಗಿ ರಸಿಕ್‌ದಾರ್‌ಗೆ 6 ಕೋಟಿ ರೂ ನೀಡಿ ಖರೀದಿಸಿದೆ.

2025ರ ಐಪಿಲೆ ಮೇಗಾ ಹರಾಜು: ಆರ್‌ಸಿಬಿಗೆ 6ನೇ ಆಟಗಾರನ ಆಗಮನ..!

IPL Mega Auction 2025 RCB buys Suyesh Sharma

ಈ ಐಪಿಎಲ್‌ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ 6ನೇ ಆಟಗಾರನನ್ನು ಖರೀದಿಸಿದೆ. 2025ರ ಐಪಿಎಲ್‌ಗಾಗಿ ಟೀಂ ಇಂಡಿಯಾದ ಲೆಗ್‌ ಸ್ಪೀನರ್‌ ಸುಯೇಶ್‌ ಶರ್ಮಾಗೆ 2.60 ಕೋಟಿ ರೂ ನೀಡಿ ಕೆಕೆಆರ್‌ ತಂಡದ ಮಾಜಿ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.