200 units of free electricity: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಲ್ಲಿ (Congress guarantee schemes) ಒಂದಾದ 200 ಯೂನಿಟ್ ಉಚಿತ ವಿದ್ಯುತ್ (200 units of free electricity) ಬಗ್ಗೆ ಜನರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ವಿದ್ಯುತ್ ಉಚಿತ ಕೊಟ್ಟರೂ, ಫಿಕ್ಸೆಡ್ ದರಗಳನ್ನು ಪಾವತಿ ಮಾಡಲೇ ಬೇಕಾಗುತ್ತದೆ ಎಂದು ವರದಿಯಾಗಿದೆ.
ಇದನ್ನು ಓದಿ: ಇಂದು ಕಾಂಗ್ರೆಸ್ ಮೊದಲ ಸಂಪುಟ ಸಭೆ: 5 ಗ್ಯಾರಂಟಿ ಯೋಜನೆಗಳ ಬಗ್ಗೆ ನಿರ್ಧಾರ ಪ್ರಕಟ..!?
ಹೌದು, ವಿದ್ಯುತ್ ಬಿಲ್‌ನಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಶುಲ್ಕ (Electricity charges) ಎಂಬ 2 ಭಾಗಗಳಿದ್ದು, ಕಾಂಗ್ರೆಸ್ ವಿದ್ಯುತ್ ಫ್ರೀ ಎಂದು ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ನಿಗದಿತ ಶುಲ್ಕವನ್ನು ಬಳಕೆದಾರರು ಪಾವತಿ ಮಾಡಬೇಕಾಗಬಹುದು ಎಂದು ವರದಿ ಹೇಳಿದೆ.
ಉಚಿತ ವಿದ್ಯುತ್ ಲೆಕ್ಕ ಏನು?
- ರಾಜ್ಯದಲ್ಲಿ 1.92 ಕೋಟಿ ವಿದ್ಯುತ್ ಬಳಕೆದಾರರು
- 1 ಕೋಟಿಗೂ ಅಧಿಕ ಮನೆಗಳಲ್ಲಿ ವಿದ್ಯುತ್ ಬಳಕೆ 100 ಯೂನಿಟ್‌ಗಿಂತಲೂ ಕಡಿಮೆ
- ಗೃಹ ಬಳಕೆಗೆ ವಾರ್ಷಿಕ 14,089 ದಶಲಕ್ಷ ಯೂನಿಟ್ ಅಗತ್ಯ
- ಗೃಹ ಬಳಕೆ ಪ್ರತಿ ಯೂನಿಟ್ ವೆಚ್ಚ ರೂ. ₹9.12- ಒಟ್ಟು ₹12,849 ಕೋಟಿ
- 100 ಯೂನಿಟ್‌ಗೂ ಕಡಿಮೆ ಬಳಕೆ ಇರುವ ಗ್ರಾಹಕರನ್ನು ಹೊರತು ಪಡಿಸಿದರೆ ವಾರ್ಷಿಕ ವೆಚ್ಚ ₹6,400 ಕೋಟಿ
- ಕುಟೀರ ಜ್ಯೋತಿ, ಭಾಗ್ಯಜ್ಯೋತಿ, ಪಂಪ್‌ಸೆಟ್ ವಿದ್ಯುತ್‌ಗಳಿಗೆ ವಾರ್ಷಿಕ ವೆಚ್ಚ ರೂ.14,500 ಕೋಟಿ
ಇದನ್ನು ಓದಿ: 2000 ನೋಟು ವಾಪಸಾತಿ, ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಭೂಮಿಯ ಬೆಲೆ ಕುಸಿಯುತ್ತದೆಯೇ?