ನವದೆಹಲಿ: ಕೇಂದ್ರ ಸರ್ಕಾರ ಪಿಎಫ್ ಖಾತೆದಾರರಿಗೆ ಬಹುಮುಖ್ಯ ಮಾಹಿತಿ ನೀಡಿದ್ದು, ಕೊರೋನಾದಿಂದ ಮೃತಪಟ್ಟ ಭವಿಷ್ಯ ನಿಧಿ ಖಾತೆದಾರರ ಕುಟುಂಬಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯವು ಇಎಸ್ಐಸಿ ಮತ್ತು ಇಪಿಎಫ್‌ಒ ಯೋಜನೆಗಳ ಮೂಲಕ ಪರಿಹಾರದ ಮೊತ್ತ ಪ್ರಕಟಿಸಿದೆ.
ಹೌದು ಇಪಿಎಫ್‌ಒ ಸದಸ್ಯರು ಒಂದು ವೇಳೆ ಕೊರೋನಾದಿಂದ ಸಾವನ್ನಪ್ಪಿದರೆ ನಾಮಿನಿಗೆ ಕನಿಷ್ಠ ₹2.5 ಲಕ್ಷ ಮತ್ತು ಗರಿಷ್ಠ ₹7 ಲಕ್ಷ ನೀಡಲಾಗುತ್ತದೆ. ಈ ಮೊದಲು ಇದರ ಮಿತಿ ₹6 ಲಕ್ಷ ಇತ್ತು. ಇಡಿಎಲ್ಐ ಯೋಜನೆಯ ಲಾಭ ಪಡೆಯಲು ಅದೇ ಸಂಸ್ಥೆಯಲ್ಲಿ ಸತತ 12 ತಿಂಗಳು ಕೆಲಸ ಮಾಡುವುದು ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ನಿಯಮದಲ್ಲಿ ಬದಲಾವಣೆ ಮಾಡಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.