Gruha Lakshmi: ರಾಜ್ಯ ಸರ್ಕಾರವು ಸದ್ಯಕ್ಕೆ ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಿಗೆ ಸೂಚಿಸಿದ್ದು, ಹೀಗಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂ. ಪಡೆಯುವ ಯೋಜನೆಗೆ ಫಲಾನುಭವಿಗಳಾಗಲು ಸದ್ಯಕ್ಕೆ ಸಾಧ್ಯವಿಲ್ಲ. ಹಲವು ಕುಟುಂಬಗಳು ವಂಚಿರಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಓದಿ: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್; ಹೆಸರು ಬದಲಾವಣೆ, ಸೇರ್ಪಡೆಗೆ ಮಾತ್ರ ಅವಕಾಶ!
Gruha Lakshmi: ಗೃಹಲಕ್ಷ್ಮೀ 2000 ಬೇಕಿದ್ದಲ್ಲಿ, ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಹೆಸ್ರು ಬದಲಿಸಿ!
ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಜಾರಿಗೊಳಿಸಿದ್ದು, ಇದಕ್ಕೆ ರೇಷನ್ ಕಾರ್ಡ್‌ಲ್ಲಿ ಮಹಿಳೆಯೇ ಮನೆಯ ಯಜಮಾನಿ ಆಗಿರಬೇಕು. ಈ ಹಿನ್ನಲೆ ಯಜಮಾನಿ ಬದಲಾವಣೆಗೆ ಅವಕಾಶ ನೀಡಲಾಗಿದೆ. ಇದನ್ನು ನೀವು ಸುಲಭವಾಗಿ ಆನ್ಲೈನಲ್ಲಿ ಮಾಡಬಹುದು. ಇಲ್ಲಿ ಕ್ಲಿಕ್ಕಿಸಿ https://ahara.kar.nic.in, ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಮಾಡಿ. ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ, ಅಗತ್ಯ ದಾಖಲೆ ಅಪಲೋಡ್ ಮಾಡಿ.ಸಲ್ಲಿಕೆ ನಂತ್ರ ರಿಜಿಸ್ಟರ್ ನಂಬರ್ ಸಿಗುತ್ತೆ.
Gruha Lakshmi: ತಪ್ಪದೆ ಇದನ್ನು ಲಿಂಕ್ ಮಾಡಿಸಿ
ಇನ್ನು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಸ್ಥಿತಿ ತಿಳಿದುಕೊಳ್ಳಿ. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಸೂಚಿಸಿದ್ದು, ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಬೇಕು. ಈಗಾಗಲೇ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣ ಕೂಡ ಬಂದಿದ್ದು, ಅದೇ ರೀತಿ ಅದೇ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಕೂಡ ಬರುತ್ತದೆ ಎಂದು ಸರ್ಕಾರ ಸೂಚಿಸಿದೆ.
ಇದನ್ನು ಓದಿ: 2 ತಿಂಗಳೂ ಸಿಗಲ್ಲ 5 ಕೆಜಿ ಅಕ್ಕಿ; ಈ ತಿಂಗಳು 5 ಕೆಜಿ ಅಕ್ಕಿ ಬದಲು ಹಣ!!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |