Mobile Charge ಹಾಕಿ ಬೆಡ್ ಪಕ್ಕ ಇಟ್ಟು ಮಲಗ್ತೀರಾ? ಹಾಗಿದ್ರೆ ಎಚ್ಚರ!

ಹೈದರಾಬಾದ್:‌ ರಾತ್ರಿ ಮಲಗುವ ವೇಳೆ ಮೊಬೈಲ್ ಚಾರ್ಜ್‌ಗೆ ಹಾಕಿ ಬೆಡ್ ಪಕ್ಕದಲ್ಲೇ ಇಟ್ಟುಕೊಂಡು ಮಲಗುವ ಅಭ್ಯಾಸ ಹಲವರಿಗೆ ರೂಢಿಯಾಗಿದೆ. ಇನ್ನೂ ಕೆಲವರು ಚಾರ್ಜ್ ಹಾಕಿರುವ ಮೊಬೈಲನ್ನು ಬೆಡ್ ಮೇಲೆಯೇ ಇಟ್ಟುಕೊಂಡು ಮಲಗುತ್ತಾರೆ. ನೀವೂ ಕೂಡಾ…

ಹೈದರಾಬಾದ್:‌ ರಾತ್ರಿ ಮಲಗುವ ವೇಳೆ ಮೊಬೈಲ್ ಚಾರ್ಜ್‌ಗೆ ಹಾಕಿ ಬೆಡ್ ಪಕ್ಕದಲ್ಲೇ ಇಟ್ಟುಕೊಂಡು ಮಲಗುವ ಅಭ್ಯಾಸ ಹಲವರಿಗೆ ರೂಢಿಯಾಗಿದೆ. ಇನ್ನೂ ಕೆಲವರು ಚಾರ್ಜ್ ಹಾಕಿರುವ ಮೊಬೈಲನ್ನು ಬೆಡ್ ಮೇಲೆಯೇ ಇಟ್ಟುಕೊಂಡು ಮಲಗುತ್ತಾರೆ. ನೀವೂ ಕೂಡಾ ಹೀಗೆ ಮಾಡ್ತೀರಾ ಅಂದ್ರೆ ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ಯಾಕಂದ್ರೆ ಹೀಗೆ ಮಲಗುವಾಗ ಮೊಬೈಲ್ ಚಾರ್ಜ್ ಹಾಕಿಕೊಂಡ ಮಲಗಿದ್ದ ಯುವಕನೋರ್ವ ಕರೆಂಟ್ ಶಾಕ್‌ನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಈ ದುರದೃಷ್ಟಕರ ಘಟನೆ ನಡೆದಿರುವುದು ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ. ಮೊಬೈಲ್ ಚಾರ್ಜರ್‌ನಿಂದ ಕರೆಂಟ್ ತಗುಲಿ ಸಾವನ್ನಪ್ಪಿದ ಯುವಕನನ್ನು ಮಾಲೋತ್ ಅನಿಲ(25) ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಯುವಕ ಮೊಬೈಲ್ ಬಳಕೆ ಮಾಡಿ ಚಾರ್ಜ್‌ಗೆ ಹಾಕಿ ಬೆಡ್ ಮೇಲೇ ಇಟ್ಟುಕೊಂಡು ಮಲಗಿದ್ದ. ರಾತ್ರಿ ನಿದ್ರೆಯಲ್ಲಿರುವಾಗ ಮೊಬೈಲ್ ಚಾರ್ಜರ್ ವಯರ್‌ನ ಸಂಪರ್ಕಕ್ಕೆ ಬಂದಿದ್ದು ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಅನಿಲ್ ತೀವ್ರ ಅಸ್ವಸ್ಥಗೊಂಡಿದ್ದು ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

Vijayaprabha Mobile App free

ಆದರೆ ಯುವಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. 3 ವರ್ಷಗಳ ಹಿಂದೆ ವಿವಾಹವಾಗಿದ್ದ ಅನಿಲ್‌ಗೆ, ಪತ್ನಿ ಹಾಗೂ ಒಂದೂವರೆ ವರ್ಷದ ಮಗಳು ಇದ್ದು, ಕುಟುಂಬಸ್ಥರನ್ನು ಅಗಲಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.