ನವದೆಹಲಿ: ಕರೋನಾ ವೈರಸ್ ಹಿನ್ನಲೆ ನಾವು ಮನೆಯಿಂದ ಹೊರಬರಲು ಹೆದರುತ್ತಿದ್ದೇವೆ. ಯಾವುದೇ ಸರ್ಕಾರಿ ಸೇವೆಗಳಿಗೆ ಸರ್ಕಾರಿ ಕಚೇರಿಗಳಿಗೆ ಹೋಗುವ ಭಯ ಇನ್ನೂ ಹೆಚ್ಚಾಗಿದ್ದು, ಇದಕ್ಕಾಗಿಯೇ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಒಂದು ಪ್ರಮುಖ ಸೇವೆಯನ್ನು ತಂದಿದೆ.
ಈ ಹೊಸ ಆಪ್ ಡೇಟ್ ನೊಂದಿಗೆ, ನೀವು ಈಗ ಆಧಾರ್ ಕೇಂದ್ರಕ್ಕೆ ಭೇಟಿ ನೀಡದೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಭಾಷೆಯನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು ಎಂದು ಯುಐಡಿಎಐ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನು ಬಿಟ್ಟು ಉಳಿದ ಸೇವೆಗಳ ನವೀಕರಣಕ್ಕಾಗಿ ಆಧಾರ್ ಸೇವಾ ಕೇಂದ್ರ ಅಥವಾ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
ನಿಮ್ಮ ಆಧಾರ್ ಅನ್ನು ಈ ರೀತಿ ನವೀಕರಿಸಿ:
ಹಂತ 1: ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ (uidai.gov.in) ಹೋಗಬೇಕು.
ಹಂತ 2: ಮೈ ಆಧಾರ್ ವಿಭಾಗಕ್ಕೆ ಹೋಗಿ ‘ಆಪ್ ಡೇಟ್ ಡೆಮೊಗ್ರಾಫಿಕ್ ಡೇಟಾ ಆನ್ ಲೈನ್ ಮೇಲೆ’ ಕ್ಲಿಕ್ ಮಾಡಿ.
ಹಂತ 3: ನಂತರ ‘ಪ್ರೋಸಿಡ್ ಟು ಅಪ್ ಡೇಟ್ ಆಧಾರ್ ನ್ನು ಆಯ್ಕೆಮಾಡಿ.
ಹಂತ 4: ಈಗ ನಿಮ್ಮ ಆಧಾರ್ ಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
ಹಂತ 5: ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ.
ಹಂತ 6: ಈಗ ನಿಮಗೆ ಕಾಣುವ ಡೆಮೊಗ್ರಾಫಿಕ್ ಡೇಟಾ ಆಯ್ಕೆಮಾಡಿ.
ಹಂತ 7: ನಂತರ ಟ್ಯಾಬ್‌ನಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ ಇತ್ಯಾದಿ ಆಯ್ಕೆಗಳು ಕಾಣುತ್ತವೆ.
ಹಂತ 8: ಈಗ ನೀವು ಮೇಲಿ ಹೇಳಿದ ಆಯ್ಕೆಯಲ್ಲಿ ನವೀಕರಿಸಲು ಬಯಸುವದನ್ನು ಆರಿಸಿ.
ಹಂತ 9: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಐಡಿಯನ್ನು ವಿಳಾಸ ಪುರಾವೆ ಎಂದು ಅಪ್‌ಲೋಡ್ ಮಾಡಬೇಕು. ಇದನ್ನು ಯಾವುದೇ ಸ್ವರೂಪದಲ್ಲಿ ಪಿಡಿಎಫ್, ಜೆಪಿಇಜಿ ಅಥವಾ ಪಿಎನ್‌ಜಿ ರೂಪದಲ್ಲಿ ಅಪ್‌ಲೋಡ್ ಮಾಡಬಹುದು.
ಹಂತ 10: ಡೆಬಿಟ್ / ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ರೂ. 50 ಆನ್‌ಲೈನ್‌ನಲ್ಲಿ ಪಾವತಿಸಿ.
ಹಂತ 11: ಆನ್‌ಲೈನ್ ಪಾವತಿ ಯಶಸ್ವಿಯಾದ ನಂತರ ದೃಡೀಕರಣಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಯುಆರ್ಎನ್ ಕೋಡ್ ತಕ್ಷಣ ಬರುತ್ತದೆ.