PM Kisan Samman Nidhi Yojana: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Govt)ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇದರ ಭಾಗವಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು(PM Kisan Samman Nidhi Yojana) ಜಾರಿಗೆ ತಂದಿದ್ದು, ಮೂರೂ ಕಂತುಗಳಲ್ಲಿ 2,000 ರೂಗಳಂತೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಂತೆ ರಾಜ್ಯ ಸರ್ಕಾರವು (State Govt) ಕೂಡ ವಾರ್ಷಿಕ 4000 ರೂಗಳನ್ನು ರೈತರ (Farmer) ಖಾತೆಗೆ ಜಮೆ ಮಾಡುತ್ತದೆ.
ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ 2000ರೂ, ಪಿಎಂ ಕಿಸಾನ್ 14ನೇ ಕಂತು ಬಿಡುಗಡೆ!
ಇಲ್ಲಿಯವೆರೆಗೆ 2,000 ರೂಗಳಂತೆ 13 ಕಂತುಗಳಲ್ಲಿ ರೈತರ ಖಾತೆಗೆ (Farmer Account)ಜಮೆ ಮಾಡಲಾಗಿದ್ದು, 14 ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದು, ಈ ಕಂತಿನ ದಿನಾಂಕವನ್ನು ಕೇಂದ್ರ ಸರ್ಕಾರ ಶೀಘ್ರ ಪ್ರಕಟಿಸುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಜುಲೈ ನಡುವೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿನ ಹಣ ರಿಲೀಸ್ ಆಗುವ ಸಾಧ್ಯತೆಯಿದೆ.
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ
ಲಕ್ಷಾಂತರ ರೈತರ KYC ಅಪ್ಡೇಟ್ ಸರಿಯಾಗಿ ಆಗದೇ ಇದ್ದಿದ್ದರಿಂದ 13ನೇ ಕಂತು ಪಡೆದವರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಈ ಯೋಜನೆಗೆ ಮತ್ತೆ ಹೊಸದಾಗಿ ನೋಂದಾಯಿಸಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದ್ದು, ತಕ್ಷಣ ರಿಜಸ್ಟರ್ (Register) ಮಾಡಿಕೊಳ್ಳಿ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ (PM Kisan Samman Nidhi Yojana) ನೋಂದಣಿಯನ್ನು, ರೈತರು ಮೊಬೈಲ್ ನಲ್ಲೇ ಮಾಡಿಸಬಹುದು ಮತ್ತು ಈಗಾಗಲೇ ನೋಂದಣಿ ಮಾಡಿಸಿದ್ದರೆ ಸರಿಯಾಗಿದೆಯೋ ಇಲ್ಲವೋ ಚೆಕ್ ಕೂಡ ಮಾಡಬಹುದು.
ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಹೊಸ ರೈತರು ನೊಂದಾಯಿಸುವುದು ಹೇಗೆ?
> ಪಿಎಂ ಕಿಸಾನ್ ವೆಬ್ಸೈಟ್ pmkisan.gov.in ಗೆ ಲಾಗ್‌ಇನ್ ಆಗಿ. ವೆಬ್ಸೈಟ್ನ ಮಧ್ಯಭಾಗದಲ್ಲಿರುವ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ.
> ಆಗ ಈ ಯೋಜನೆಯ ಪೇಜ್ ತೆರೆದುಕೊಳ್ಳಲಿದ್ದು, ಇಲ್ಲಿ ರೈತರು ಗ್ರಾಮೀಣ ಪ್ರದೇಶದವರಾಗಿದ್ದರೆ Rural Farmer Registration ನಗರ ಪ್ರದೇಶದವರಾಗಿದ್ದರೆ Urban Farmer Registration ಎಂದು ಆಯ್ಕೆ ಮಾಡಿಕೊಳ್ಳಬೇಕು.
> ನಂತರ ಆಧಾರ್ ನಂಬರ್ ನಮೂದಿಸಿ, ಆಧಾರ್ ಜೊತೆ ಲಿಂಕ್ ಆಗಿರುವ ಮೊಬೈಲ್ ನಂ ನಮೂದಿಸಬೇಕು.
> ನಂತರ ಯಾವ ರಾಜ್ಯ ಎಂದು ಆಯ್ಕೆ ಮಾಡಿ CAPTCHA ಕೋಡ್ ಬರೆದು, OTP ಪಡೆಯಬೇಕು.
> ನಂತರ ನಿಮ್ಮ ಮೊಬೈಲಿಗೆ ಬಂದ OTP ನಮೂದಿಸಿ, ಇದಾದ ಬಳಿಕ ಪಿಎಂ ಕಿಸಾನ್ ಅರ್ಜಿ ಕಾಣುತ್ತದೆ. ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಸೇವ್ ಮಾಡಿ ಪ್ರಿಂಟ್ ಪಡೆಯಿರಿ.
ಪಿಎಂ ಕಿಸಾನ್ ಯೋಜನೆ ನೋಂದಣಿಗೆ ಬೇಕಾಗುವ ದಾಖಲೆಗಳು
ಪಿಎಂ ಕಿಸಾನ್ ಯೋಜನೆ (PM Kisan Samman Nidhi Yojana) ನೋಂದಣಿ ಮಾಡಲು ಆಧಾರ್ ಕಾರ್ಡ್, ಜಮೀನಿಗೆ ಸಂಬಂಧಿಸಿದ ದಾಖಲೆಗಳು (ಆರ್.ಟಿಸಿ ಪಹಣಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಇದರ ಜೊತೆಗೆ ಬ್ಯಾಂಕ್ ಖಾತೆ ಪಾಸ್ ಬುಕ್, ಪಾಸ್ ಪೋರ್ಟ್ ಗಾತ್ರದ ಫೋಟೋ ಇರಬೇಕು.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!
ನಿಮ್ಮ ನೋಂದಣಿ ಸರಿಯಾಗಿದೆ ಎಂದು ಚೆಕ್ ಮಾಡುವುದು ಹೇಗೆ
ಪಿಎಂ ಕಿಸಾನ್ ಯೋಜನೆಗೆ (PM Kisan Samman Nidhi Yojana) ನೋಂದಣಿ ಮಾಡಿಸಿದ್ದಾರೆ,ಚೆಕ್ ಮಾಡಲು https://pmkisan.gov.in/FarmerStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ನಂಬರ್ ಹಾಕಿ, ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಗಮನಿಸಿ: ಪಿಎಂ ಕಿಸಾನ್ ಯೋಜನೆಗೆ (PM Kisan Samman Nidhi Yojana) ನೋಂದಣಿ ಮಾಡಿಸಿದ ಕರ್ನಾಟಕದ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನು ಓದಿ: WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ