ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar card) ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ದಾಖಲೆಯಾಗಿದ್ದು, ಹಣಕಾಸಿನ ವ್ಯವಹಾರಗಳಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಇನ್ನು, ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಇತರ ಅಂಚೆ ಕಚೇರಿ ಉಳಿತಾಯ ಯೋಜನೆಗಳಂತಹ ಸಣ್ಣ ಮೊತ್ತದ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಎಚ್ಚರಿಕೆ.
ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಗೆ ರೈತರು ನೊಂದಾಯಿಸುವುದು ಹೇಗೆ? ಸರಿಯಾಗಿದೆ ಎಂದು ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಹೌದು, ಆಯಾ ಯೋಜನೆಗಳ ಹೂಡಿಕೆದಾರರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಂಚೆ ಕಚೇರಿ (Post Office) ಅಥವಾ ಬ್ಯಾಂಕ್ ಶಾಖೆಗೆ (Bank Branch) ಹೋಗಿ ಅವರು ಹೂಡಿಕೆ ಮಾಡುವ ಉಳಿತಾಯ ಯೋಜನೆಗೆ (Savings Scheme) ಸೆಪ್ಟೆಂಬರ್ 30, 2023 ರೊಳಗೆ ಆಧಾರ್ ಅನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಆ ಉಳಿತಾಯ ಖಾತೆಗಳು ಸ್ಥಗಿತವಾಗುವ ಅಪಾಯವಿದೆ. ಖಾತೆಯನ್ನು ಸ್ಥಗಿತಗೊಳಿಸಿದರೆ, ಠೇವಣಿ ಮತ್ತು ಹಿಂಪಡೆಯುವಿಕೆ ಸಾಧ್ಯವಾಗುವುದಿಲ್ಲ.
ಇದನ್ನು ಓದಿ: UPI Payment: ಬಂಪರ್ ಆಫರ್ ಘೋಷಣೆ, ಇನ್ಮುಂದೆ UPI ವಹಿವಾಟುಗಳಿಗೆ EMI ಸೌಲಭ್ಯ!
ನಿಮ್ಮ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ:
ನೀವು ಸೆಪ್ಟೆಂಬರ್ 30, 2023 ರೊಳಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸದಿದ್ದರೆ, ನಿಮ್ಮ ಉಳಿತಾಯ ಖಾತೆಯನ್ನು ಫ್ರೀಜ್ (Freeze)ಮಾಡಲಾಗುತ್ತದೆ. ಅಂದರೆ ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ನೀವು ಆಧಾರ್ ಸಂಖ್ಯೆಯನ್ನು ನೀಡುವವರೆಗೆ ನಿಮ್ಮ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ಆದ್ದರಿಂದ ನೀವು ಅದರಲ್ಲಿ ಠೇವಣಿ ಇಡಲು ಮತ್ತು ಮೆಚ್ಯೂರಿಟಿಯಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ 2000ರೂ, ಪಿಎಂ ಕಿಸಾನ್ 14ನೇ ಕಂತು ಬಿಡುಗಡೆ!
ಖಾತೆಯನ್ನು ಫ್ರೀಜ್ ಮಾಡಿದರೆ ಏನಾಗುತ್ತದೆ?
ಗಡುವಿನೊಳಗೆ ನೀವು ಆಧಾರ್ ಸಂಖ್ಯೆಯನ್ನು ನೀಡದಿದ್ದರೆ, ನಿಮ್ಮ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಅದರ ಮೂಲಕ ಹೂಡಿಕೆದಾರರ ಬ್ಯಾಂಕ್ ಖಾತೆಗೆ (Bank Account) ಯಾವುದೇ ಬಡ್ಡಿ ಜಮೆಯಾಗುವುದಿಲ್ಲ.
PPF ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಖಾತೆದಾರರು ಖಾತೆಯನ್ನು ಸ್ಥಗಿತಗೊಳಿಸಿದರೆ ಹಣವನ್ನು ಜಮಾ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಮೆಚ್ಯೂರಿಟಿ ಮೊತ್ತವು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಹೋಗುವುದಿಲ್ಲ
ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31, 2023 ರಂದು ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಕಡ್ಡಾಯವಾಗಿದೆ. ಈಗಾಗಲೇ ಖಾತೆ ಹೊಂದಿದ್ದರೂ ಆಧಾರ್ ನೀಡದೇ ಇರುವವರು ಆರು ತಿಂಗಳೊಳಗೆ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ಸೆಪ್ಟೆಂಬರ್ 30ರ ಮೊದಲು ಕೊಡಬೇಕು.
ಇದನ್ನು ಓದಿ: WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ
ತಕ್ಷಣ ಆಧಾರ್ ಸಲ್ಲಿಸಿ:
ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು (Aadhaar Number) ಒದಗಿಸುವ ಗಡುವು ಸಮೀಪಿಸುತ್ತಿದೆ. ಅದನ್ನು ಸೆಪ್ಟೆಂಬರ್ 30ರೊಳಗೆ ನೀಡಬೇಕು. ತಕ್ಷಣ ಅಂಚೆ ಕಚೇರಿ, ಬ್ಯಾಂಕ್ ಶಾಖೆಗೆ ತೆರಳಿ ತಡ ಮಾಡದೆ ಆಧಾರ್ ಹಾಜರುಪಡಿಸಿ.
ಇದನ್ನು ಓದಿ: ಪಡಿತರ ಚೀಟಿಯಲ್ಲಿ ಎಷ್ಟು ವಿಧಗಳಿವೆ, ನಿಮ್ಮ ಕಾರ್ಡ್ ಯಾವ ವರ್ಗಕ್ಕೆ ಸೇರುತ್ತದೆ? ಈ ಕಾರ್ಡ್ ಇದ್ದವರಿಗೆ ಈ ಸೌಲಭ್ಯ..!
ಯಾವ ಯೋಜನೆಯಲ್ಲಿ ಬಡ್ಡಿ ದರ (Interest Rate) ಎಷ್ಟು?
ಪ್ರಸ್ತುತ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಪ್ರಸ್ತುತ 7.1% ಬಡ್ಡಿಯನ್ನು ಪಾವತಿಸುತ್ತಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಶೇಕಡಾ 8.2, ಕಿಸಾನ್ ವಿಕಾಸ್ ಪತ್ರದಲ್ಲಿ ಶೇಕಡಾ 7.5 ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಶೇಕಡಾ 7.7 ಬಡ್ಡಿಯನ್ನು ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ಶೇ.8ಕ್ಕೆ ಏರಿಕೆಯಾಗಿದೆ.
ಇನ್ನು, ಸಾಮಾನ್ಯ ಸಾರ್ವಜನಿಕ ಭವಿಷ್ಯ ನಿಧಿ (GPF) ಸೇರಿದಂತೆ ಇತರ ಭವಿಷ್ಯ ನಿಧಿಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, PPF, GPF ಮತ್ತು CPF ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
ಇದನ್ನು ಓದಿ: PPF vs NPS: ಯಾರೆಲ್ಲಾ ಹೂಡಿಕೆ ಮಾಡಬಹುದು, ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ