7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

ಹೊಸದಾಗಿ ಪ್ಯಾನ್ ಕಾರ್ಡ್ (Pan Card) ಮಾಡಿಸಲು ಬಯಸುವರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅವಶ್ಯಕತೆಯಿಲ್ಲ. ನೀವೇ ಸ್ವತಃ ನಿಮ್ಮ ಪ್ಯಾನ್ ಕಾರ್ಡ್ ಮಾಡಿಸಲು ಸರಳವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಿದ…

Pan card

ಹೊಸದಾಗಿ ಪ್ಯಾನ್ ಕಾರ್ಡ್ (Pan Card) ಮಾಡಿಸಲು ಬಯಸುವರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅವಶ್ಯಕತೆಯಿಲ್ಲ. ನೀವೇ ಸ್ವತಃ ನಿಮ್ಮ ಪ್ಯಾನ್ ಕಾರ್ಡ್ ಮಾಡಿಸಲು ಸರಳವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ನಿಮ್ಮ ಮನೆಗೆ PAN ಕಾರ್ಡ್‌ ಬರುತ್ತದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮಹತ್ವದ ಆದೇಶ; ಆಯುಷ್ಮಾನ್ ಭಾರತ್ ಕಾರ್ಡ್​ ವಿತರಣೆ ಸಂಪೂರ್ಣ ಸ್ಥಗಿತ

ಹೌದು, ಇಲಾಖೆಯ NSDLನ ಅಧಿಕೃತ ಸೈಟ್‌ಗೆ https://www.onlineservices.nsdl.com/paam/endUserRegisterContact.html ಹೋಗಿ, ಆನ್‌ಲೈನ್ PAN ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ. ಇದರ ನಂತರ, ನಿಮಗೆ ಬೇಕಿರುವ ಪ್ಯಾನ್‌ ಆಯ್ಕೆಯನ್ನು ಕ್ಲಿಕ್, ಫಾರ್ಮ್ ಅನ್ನು ಭರ್ತಿ ಮಾಡಿ.

Vijayaprabha Mobile App free

ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ಒಟ್ಟು 105 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿದೇಶಿ ಪ್ರಜೆಗಳಾದರೆ ರೂ 1,020 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಪ್ಯಾನ್ ಕಾರ್ಡ್ 7 ದಿನಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆಗೆ ತಲುಪುತ್ತದೆ.

ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್‌ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

PAN ಕಳೆದು ಹೋಗಿದೆಯೇ? 5 ನಿಮಿಷಗಳಲ್ಲಿ ಡೌನ್‌ಲೋಡ್ ಮಾಡಿ

ಇನ್ನು, ನಿಮ್ಮ ಪಾನ್ ಕಾರ್ಡ್ ಕಳೆದುಹೋದ ಸಂದರ್ಭದಲ್ಲಿ ಹೀಗೆ ಮಾಡಿ

➤ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ https://www.incometax.gov.in/ ಭೇಟಿ ನೀಡಿ

➤ಅಲ್ಲಿ ಕಾಣಿಸುವ Instant E PAN ಆಯ್ಕೆಯನ್ನು ಆರಿಸಿ

➤ನಂತರ ಹೊಸ E PAN ಗೆ ಹೋಗಿ, ಮಾಹಿತಿಯನ್ನು ಭರ್ತಿ ಮಾಡಿ

➤ಸಮ್ಮತಿಸಿ, OTP ಅನ್ನು ಭರ್ತಿ ಮಾಡಿ, ನಂತರ ದೃಢೀಕರಿಸಿ

➤ನೀವು ನೋಂದಾಯಿತ ಇಮೇಲ್ ಐಡಿಯಲ್ಲಿ PAN ಕಾರ್ಡ್ PDF ಅನ್ನು ಪಡೆಯುತ್ತೀರಿ

ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗ ಹುದ್ದೆಗಳಿಗೆ ಅರ್ಜಿ ಅಹ್ವಾನ; ವಿದ್ಯಾರ್ಹತೆ ಬೇಕಿಲ್ಲ, ಇಂದೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.