ಆಯುಷ್ಮಾನ್ ಆರೋಗ್ಯ ಕಾರ್ಡ್: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್ (ಆರೋಗ್ಯ ಕಾರ್ಡ್) ವಿತರಣೆ ಕಾರ್ಯ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ಇದನ್ನು ಓದಿ: ಇಂದಿನಿಂದ ಐಪಿಎಲ್ ಹಬ್ಬ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ
ಹೌದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ವಿತರಣೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದ್ದು, ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ. ಅಷ್ಟು, ಮಾತ್ರವಲ್ಲದೆ, ಗುರುತಿನ ಚೀಟಿ ಕುರಿತಂತೆ ಎಲ್ಲಾ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿರುವುದರಿಂದ ರಾಜ್ಯದ ಜನರಿಗೆ ಆಯುಷ್ಮಾನ್ ಕಾರ್ಡ ಸದ್ಯಕ್ಕೆ ಸಿಗುವುದಿಲ್ಲ ಎನ್ನಲಾಗಿದೆ.
ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ
ಬರುವ ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಜತೆಗೆ ಕಾರ್ಡ್ ನೋಂದಣಿ, ಹಂಚಿಕೆ ಸೇರಿದಂತೆ ಆಯುಷ್ಮಾನ್ ಕಾರ್ಡ್ ಸಂಬಂಧಿಸಿದ ಯಾವುದೇ ಚಟುವಟಿಕೆಗಳ್ನು ಮುಂದಿನ ಆದೇಶದವರೆಗೂ ಕೈಗೊಳ್ಳಬಾರದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ
ಇದನ್ನು ಓದಿ: KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಸದ್ಯ, ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾಸ್ಪತ್ರೆಗಳ ಮುಖ್ಯಸ್ಥರು, ಆಯುಷ್ಮಾನ್ ಯೋಜನೆ ಜಾರಿ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಚುನಾವಣೆ ಮುಗಿಯುವವರೆಗೂ ಹೊಸ ಆಯುಷ್ಮಾನ್ ಕಾರ್ಡ್‌ಗೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಲಿದೆ.
ಆಯುಷ್ಮಾನ್ ಯೋಜನೆ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ :
ಇನ್ನು, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್(ಅಯುಷ್ಮಾನ್ ಕಾರ್ಡ್)(Ayushman Bharat Prime Minister Janarogya Arogya Karnataka Card) ಹೊಸದಾಗಿ ವಿತರಣೆ ಮಾಡುವುದಕ್ಕೆ ಮಾತ್ರ ನಿರ್ಬಂಧ ಹಾಕಲಾಗಿದ್ದು, ಈ ಆರೋಗ್ಯ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಲು ಯಾವುದೇ ನಿರ್ಬಂಧ ಇಲ್ಲ. ಈಗಾಗಲೇ ಅಯುಷ್ಮಾನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಆಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಂದಿನಂತೆಯೇ ಪಡೆಯಬಹುದು.
ಇದನ್ನು ಓದಿ: ಏಪ್ರಿಲ್ 1 ರಿಂದ ಇವುಗಳ ಬೆಲೆ ಭಾರೀ ಹೆಚ್ಚಳ: ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ನೋಡಿ
ಆಯುಷ್ಮಾನ್ ಆರೋಗ್ಯ ಕಾರ್ಡ್ ನಿಂದ ಸಿಗುವ ಸೌಲಭ್ಯವೇನು? ಪಡೆಯುವುದು ಹೇಗೆ ?
ಆಯುಷ್ಮಾನ್ ಆರೋಗ್ಯ ಕಾರ್ಡ್(Ayushman Health Card) ನಿಂದ ಬಿಪಿಎಲ್ ಕಾರ್ಡ್(BPL Card) ಹೊಂದಿರುವವರಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದ್ದು, ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ ಇರುತ್ತದೆ. ಇನ್ನು, ಆಯುಷ್ಮಾನ್ ಆರೋಗ್ಯ ಯೋಜನೆಯಡಿ ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.
ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗ ಹುದ್ದೆಗಳಿಗೆ ಅರ್ಜಿ ಅಹ್ವಾನ; ವಿದ್ಯಾರ್ಹತೆ ಬೇಕಿಲ್ಲ, ಇಂದೇ ಅರ್ಜಿ ಸಲ್ಲಿಸಿ
ಆಯುಷ್ಮಾನ್ ಆರೋಗ್ಯ ಕಾರ್ಡ್ ಹೊಂದಿದವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದರೆ ಅಲ್ಲಿ ಮಾತ್ರ ಅಲ್ಲಿಯೇ ನೀಡಲಾಗುತ್ತದೆ. ಒಂದು ವೇಳೆ ಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಿದ್ದರೆ ರೆಫರಲ್ ಮಾಡಿಸಿಕೊಂಡು, ರೋಗಿ ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಇನ್ನು, ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಹೃದಯರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಸೇರಿದಂತೆ ತೃತೀಯ ಹಂತದ ಸುಮಾರು 900 ಚಿಕಿತ್ಸೆಗಳು ಹಾಗೂ ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು