Gram suraksha yojana : ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಅಪಾಯಗಳೊಂದಿಗೆ ಭರ್ಜರಿ ಆದಾಯವನ್ನು ನೀಡುವುದಲ್ಲದೆ, ಮೆಚ್ಯೂರಿಟಿ ಸಮಯದಲ್ಲಿ ಸುಮಾರು 31 ರಿಂದ 35 ಲಕ್ಷ ರೂಪಾಯಿಗಳ ಆದಾಯ ಪಡೆಯಲು ಹೂಡಿಕೆದಾರರು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ.
Gram suraksha yojana : ಪ್ರತಿದಿನ 50 ರೂ. ಹೂಡಿಕೆ ಮಾಡುವ ಮೂಲಕ 35 ಲಕ್ಷ ರೂ.ಲಾಭ!
ಗ್ರಾಮ ಸುರಕ್ಷಾ ಯೋಜನೆಯ ಮೂಲಕ ಹೂಡಿಕೆದಾರರು 19 ನೇ ವಯಸ್ಸಿನಲ್ಲಿ ಕನಿಷ್ಠ ವಿಮಾ ಮೊತ್ತದೊಂದಿಗೆ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ. ಅವರು 10 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅವರಿಗೆ ಕೊನೆಯಲ್ಲಿ 35 ಲಕ್ಷ ಸಿಗುತ್ತದೆ.
ಇದನ್ನೂ ಓದಿ: Aadhaar Update | ಇನ್ಮುಂದೆ ಆಧಾರ್ ಅಪ್‌ಡೇಟ್ ಅಷ್ಟು ಸುಲಭವಲ್ಲ; ಈ ನಿಯಮ ಎಲ್ಲರೂ ತಿಳಿದುಕೊಳ್ಳಲೇಬೇಕು!
ಪ್ರೀಮಿಯಂ ಪಾವತಿಸುವ ವಯಸ್ಸನ್ನು 55, 58 ಅಥವಾ 60 ವರ್ಷಗಳು ಎಂದು ಆಯ್ಕೆ ಮಾಡಬಹುದಾಗಿದ್ದು, ಹೂಡಿಕೆದಾರರು ಬೋನಸ್ ಜೊತೆಗೆ 80 ನೇ ವಯಸ್ಸಿನಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದ್ದು, ಹೂಡಿಕೆದಾರರು 80 ವರ್ಷಕ್ಕಿಂತ ಮೊದಲು ಮರಣಹೊಂದಿದರೆ, ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಮೊತ್ತವನ್ನು ಪಡೆಯುತ್ತಾರೆ.
Gram suraksha yojana ಅರ್ಹತೆ ಮತ್ತು ವಯಸ್ಸಿನ ಮಿತಿ ಏನು?
ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು 19 ರಿಂದ 55 ವರ್ಷದೊಳಗಿನ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದ್ದು, 19 ರಿಂದ 55 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು ಹೂಡಿಕೆದಾರರಿಂದ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಗಳನ್ನು ಸ್ವೀಕರಿಸಲಿದ್ದು, ಪ್ರೀಮಿಯಂ ಪಾವತಿಗಳಿಗಾಗಿ ಹೂಡಿಕೆದಾರರು 30-ದಿನಗಳ ಗ್ರೇಸ್ ಅವಧಿಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: Menstrual leave | ಮುಟ್ಟಿನ ರಜೆ ನೀಡಲು ಮುಂದಾದ ರಾಜ್ಯ ಸರ್ಕಾರ
ಗ್ರಾಮ ಸುರಕ್ಷಾ ಯೋಜನೆಯಡಿ 35 ಲಕ್ಷ ಲಾಭ ಪಡೆಯುವುದು ಹೇಗೆ?
ಗ್ರಾಮ ಸುರಕ್ಷಾ ಯೋಜನೆಯಲ್ಲಿ 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಹೂಡಿಕೆ ಮಾಡಬಹುದಾಗಿದ್ದು, 19 ವರ್ಷದಿಂದ ಹೂಡಿಕೆ ಆರಂಭಿಸಿ 10 ಲಕ್ಷದ ಪಾಲಿಸಿ ಖರೀದಿಸಿದರೆ 55 ವರ್ಷಕ್ಕೆ 1515 ರೂ ನಿಮಗೆ ಸಿಗುತ್ತದೆ. 58 ವರ್ಷಕ್ಕೆ 1463 ರೂ ಹಾಗೂ 60 ವರ್ಷಕ್ಕೆ 1411 ರೂ ಮಾಸಿಕ ಪ್ರೀಮಿಯಂ ಕಟ್ಟಲಿದ್ದು, 55 ವರ್ಷಕ್ಕೆ 31.60 ಲಕ್ಷ ರೂ., 58 ವರ್ಷಕ್ಕೆ 33.40 ಲಕ್ಷ ರೂ. ಮತ್ತು 60 ವರ್ಷಕ್ಕೆ 34.60 ಲಕ್ಷ ರೂ. ಮೆಚ್ಯೂರಿಟಿಮ್ಯೂಚ್ಯುರಿಟಿ ಲಾಭ ನಿಮಗೆ ಸಿಗುತ್ತದೆ
ಇದನ್ನೂ ಓದಿ: ಶೀಘ್ರವೇ ಒಟಿಟಿಗೆ Bhairathi Ranagal; ಯಾವಾಗ ಗೊತ್ತಾ?
ಪೋಸ್ಟ್ ಆಫೀಸ್ನಲ್ಲಿದೆ 1,515 ರೂ.ಹೂಡಿಕೆ ಮಾಡಿದ್ರೆ 35 ಲಕ್ಷ ರೂ. ಲಾಭ!
ಭಾರತೀಯ ಅಂಚೆ ಇಲಾಖೆ ನೀಡುವ ಗ್ರಾಮ ಸುರಕ್ಷಾ ಯೋಜನೆ ಉಳಿತಾಯ ಯೋಜನೆ ಮಾತ್ರವಲ್ಲದೇ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಯಾಗಿದೆ. ದೇಶದ ಗ್ರಾಮೀಣ ಜನರಿಗಾಗಿ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಭಾಗವಾಗಿ 1995 ರಲ್ಲಿ ಅಂಚೆ ಇಲಾಖೆ ಇದನ್ನು ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು ಮರಳಿ 35 ಲಕ್ಷ ಪಡೆಯಬಹುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ಬೆಸ್ಟ್ ಸ್ಕೀಮ್ ಇದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಡಿಯೋ ಕೃಪೆ – Sri Adda