ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ್ ನಾಯ್ಕ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಂಗ್ ಫು ಚಾಂಪಿಯನಶಿಪ್‌ನಲ್ಲಿ ಸಾಂಡಾ ಕ್ರೀಡೆಯ 60 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತನು ವುಶು ಅಶೋಶಿಯೇಶನ್ ಜನರಲ್ ಸೆಕ್ರೆಟರಿಯಾದ ರಾಘವೇಂದ್ರ ಹೊನ್ನಾವರ ಇವರ ರಾಯಲ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದನು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದು, ಪ್ರೇಮಾ ನಾಯ್ಕ ಹಾಗೂ ನಾಗೇಂದ್ರ ನಾಯ್ಕ ಇವರ ಪುತ್ರನಾಗಿದ್ದಾನೆ.
ಯುವಕನ ಸಾಧನೆಗೆ ಕಾಲೇಜಿನ ಶಿಕ್ಷಕರು, ಸಹಪಾಠಿಗಳು, ಸಂಬಂಧಿಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಷ್ಟ್ರಮಟ್ಟದಲ್ಲೂ ಅಲೋಕ್ ಸಾಧನೆ ಮುಂದುವರೆಸುವಂತೆ ಶುಭಹಾರೈಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment