ದೇಶದಲ್ಲಿ 75 ನೇ ಸ್ವಾತಂತ್ರೋತ್ಸವ ಹಿನ್ನಲೆ, ‘ಅಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಪ್ರತಿ ಮನೆಯ ಮೇಲೆ ಧ್ವಜಾರೋಹಣ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಹೌದು, ರಾಷ್ಟ್ರಧ್ವಜವನ್ನು ಬಳಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ನಿಯಮಗಳಿಗೆ ವಿರುದ್ಧವಾಗಿ ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಆದ್ದರಿಂದ ಯಾರಾದರೂ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಬಯಸಿದ್ದರೆ, ಈ ಕೆಳಗಿನ ನಿಯಮಗಳನ್ನು ತಪ್ಪದೆ ಅನುಸರಿಸಿ.
ಧ್ವಜಾರೋಹಣ: ಈ ನಿಯಮಗಳು ಕಡ್ಡಾಯ:
ಹರಿದ ಮತ್ತು ಹಳೆಯ ರಾಷ್ಟ್ರ ಧ್ವಜವನ್ನು ಹಾರಿಸಬಾರದು.
3 ಬಣ್ಣಗಳು, ಅಶೋಕ ಚಕ್ರ ಹೊರತುಪಡಿಸಿ ಧ್ವಜದಲ್ಲಿ ಬೇರೇನೂ ಇರುವಂತಿಲ್ಲ.
ರಾಷ್ಟ್ರದ್ವಜದಲ್ಲಿ ಕೇಸರಿ ಮೇಲ್ಭಾಗದಲ್ಲಿರಬೇಕು ಮತ್ತು ಹಸಿರು ಕೆಳಭಾಗದಲ್ಲಿರಬೇಕು.
ಬೇರೆ ಯಾವುದೇ ಧ್ವಜವು ರಾಷ್ಟ್ರಧ್ವಜಕ್ಕೆ ಸಮಾನವಾಗಿರಬಾರದು ಅಥವಾ ಎತ್ತರವಾಗಿರಬಾರದು
ರಾಷ್ಟ್ರಧ್ವಜವನ್ನು ಅಗೌರವದಿಂದ ನೆಲದ ಮೇಲೆ ಎಸೆಯಬಾರದು
ವಸ್ತುಗಳು ಮತ್ತು ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಮುಚ್ಚಬಾರದು.
ಸಾರ್ವಜನಿಕ ಸಭೆಗಳಲ್ಲಿ ರಾಷ್ಟ್ರ ಧ್ವಜವು ಪ್ರೇಕ್ಷಕರ ಎಡಭಾಗದಲ್ಲಿರಬೇಕು