Heavy rain : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಮತ್ತೆ ಭರ್ಜರಿ ಮಳೆಯಾಗಲಿದೆ (Heavy rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ಮತ್ತೆ ವರುಣ ಆರ್ಭಟಿಸಲಿದ್ದು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ʻಯೆಲ್ಲೋʼ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ: Panchanga | ಇಂದು ಶನಿವಾರ 02-11-2024; ಕಾರ್ತಿಕ ಪಾಡ್ಯಮಿ ತಿಥಿಯಂದು ಗೋವರ್ಧನ ಪೂಜೆಗೆ ಶುಭ ಮುಹೂರ್ತ ಯಾವಾಗ?
ಇನ್ನುಳಿದಂತೆ ಇನ್ನೂ ಎರಡ್ಮೂರು ದಿನ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ನ. 5ರ ನಂತರ ಮಳೆ ಸಂಪೂರ್ಣ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ. ನಿನ್ನೆ ಶಿರಾಲಿಯಲ್ಲಿ ಅತಿ ಹೆಚ್ಚು 9 ಸೆ.ಮೀ. ಮಳೆಯಾಗಿದೆ.