ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕಳೆದ ಮೂನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ನಿನ್ನೆ ಸಾಕಷ್ಟು ಕಡೆ ಧಾರಾಕಾರ ಮಳೆಯಾಗಿದ್ದು, ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬುಧವಾರದವರೆಗೆ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ತುಮಕೂರಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದ್ದು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನು ಓದಿ: ಮಹಿಳೆಯರಿಗೆ ಸಂತಸದ ಸುದ್ದಿ: ಅಂಚೆ ಕಚೇರಿಗಳಲ್ಲಿ ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ?
ಇನ್ನು, ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದ್ದು, ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದರೂ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ಇಂದು ನಗರದ ಹಲವು ಕಡೆ ಮಳೆಬೀಳುವ ಸಂಭವವಿದ್ದು, ಗಾಳಿಯ ವೇಗ ಏಕಾಏಕಿ ಹೆಚ್ಚಾಗಲಿದೆ. ಇದಲ್ಲದೆ ರಾಜ್ಯದ ನಾನಾ ಭಾಗದಲ್ಲಿ ಮಳೆ ಹಾಗೂ ಒಣಹವೆಯೂ ಮುಂದುವರೆಯಲಿದ್ದು, ಬೆಂಗಳೂರಿನಲ್ಲಿಂದು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಇದನ್ನು ಓದಿ: Jioದಿಂದ ಅದ್ಭುತ ಕೊಡುಗೆ: ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ.. 30 ದಿನಗಳ ಫ್ರಿ ಟ್ರಯಲ್, ಇನ್ನೂ ಹಲವು ಅದ್ಭುತ ಕೊಡುಗೆಗಳು!