ಭಾರೀ ಮಳೆ : ಮುಂದಿನ ಕೆಲವೇ ಗಂಟೆಗಳಲ್ಲಿ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೀದರ್, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗುಲ್ಬರ್ಗಾ, ಯಾದಗಿರಿ ಸೇರಿ ಈ ಜಿಲ್ಲೆಗಳಿಗೆ ಮಳೆಯ ಅಲರ್ಟ್ ನೀಡಲಾಗಿದೆ.
ಹೌದು, ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಮುಂದಿನ ಕೆಲವೇ ಕ್ಷಣಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಜೊತೆಗೆ ಈ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಜ್ಯದಲ್ಲಿ ಮುಂದುವರಿದ ಮಳೆ ಬೈಕ್ ಸವಾರರೇ ಎಚ್ಚರ!
- ಹತ್ತಿರದ ಪ್ರದೇಶಕ್ಕೆ ತೆರಳುವಾಗಲೂ ಹೆಲೈಟ್ ಧರಿಸಿ
- ದೂರ ಪ್ರದೇಶಕ್ಕೆ ಪ್ರಯಾಣಿಸುವಾಗ ತುಸು ಬೇಗ ಹೊರಡಿ
- ತಿರುವುಗಳಲ್ಲಿ ಓವರ್‌ಟೇಕ್ ಮಾಡುವುದನ್ನು ನಿಲ್ಲಿಸಿ
- ಸ್ಕಿಡ್ ಆಗುವ ಸಾಧ್ಯತೇ ಹೆಚ್ಚಿರುತ್ತದೆ, ವೇಗ ಕಡಿಮೆ ಇರಲಿ
- ಪ್ರತಿ ತಿರುವಿನಲ್ಲೂ ವೇಗವನ್ನು ಕಡ್ಡಾಯವಾಗಿ ಇಳಿಸಿ
- ರಸ್ತೆಯಲ್ಲಿ ಸಣ್ಣ ಪುಟ್ಟ ಕಲ್ಲು, ಪುಟ್ಟಕಲ್ಲು, ಮರಳು ಇದ್ದ ಕಡೆ ನಿಧಾನವಾಗಿ ಚಲಿಸಿ
- ಮೊಬೈಲ್ ಫೋನ್ ಬಳಸುತ್ತಾ ಚಾಲನೆ ಮಾಡಬೇಡಿ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.