Halli Shastra | ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನವೇ? ಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

Halli Shastra: ನಾವೆಲ್ಲರೂ ಹಲ್ಲಿಗಳನ್ನು ನಮ್ಮ ಮನೆ, ತೋಟ ಸೇರಿದಂತೆ ಎಲ್ಲಾ ಕಡೆ ನೋಡಿರುತ್ತೇವೆ. ಇದು ಸರೀಸೃಪವಾಗಿದೆ ಸಾಮಾನ್ಯವಾಗಿ ಮಾನವ ವಾಸಸ್ಥಳಗಳ ಸುತ್ತಲೂ ಎಲ್ಲೆಡೆ ಕಂಡುಬರುತ್ತದೆ. ಆದ್ದರಿಂದ, ಹಲ್ಲಿ ಹೇಗೆ ಕಾಣುತ್ತದೆ ಎಂದು ನಮಗೆ…

Halli Shastra

Halli Shastra: ನಾವೆಲ್ಲರೂ ಹಲ್ಲಿಗಳನ್ನು ನಮ್ಮ ಮನೆ, ತೋಟ ಸೇರಿದಂತೆ ಎಲ್ಲಾ ಕಡೆ ನೋಡಿರುತ್ತೇವೆ. ಇದು ಸರೀಸೃಪವಾಗಿದೆ ಸಾಮಾನ್ಯವಾಗಿ ಮಾನವ ವಾಸಸ್ಥಳಗಳ ಸುತ್ತಲೂ ಎಲ್ಲೆಡೆ ಕಂಡುಬರುತ್ತದೆ. ಆದ್ದರಿಂದ, ಹಲ್ಲಿ ಹೇಗೆ ಕಾಣುತ್ತದೆ ಎಂದು ನಮಗೆ ತಿಳಿದಿದೆ. ಇನ್ನು, ಮಾನವ ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬೀಳುವುದು ವಿವಿಧ ಅರ್ಥಗಳನ್ನು ಹೊಂದಿದೆ. ಹಲ್ಲಿ ಬೀಳುವುದು ನಮಗೆ ಅದೃಷ್ಟ ಅಥವಾ ದುರದೃಷ್ಟವನ್ನು ಹೇಗೆ ತರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. 

ಇದು ಜ್ಯೋತಿಷ್ಯದಂತಹ ಭವಿಷ್ಯ ವಿಜ್ಞಾನದ ಪ್ರಕಾರವಾಗಿದೆ, ಆದ್ದರಿಂದ ಇದನ್ನು ಸಾಮಾನ್ಯವಾಗಿ ಹಲ್ಲಿ ಜ್ಯೋತಿಷ್ಯ ಮತ್ತು ವೈದಿಕ ಹಿಂದೂ ಜ್ಯೋತಿಷ್ಯದ ಭಾಗವಾಗಿ ಗೌಳಿ ಶಾಸ್ತ್ರ (Gauli Shastra) ಎಂದು ಕರೆಯಲಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಬೀಳುವ ಹಲ್ಲಿಗಳು ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನ ಅರ್ಥವನ್ನು ಹೊಂದಿವೆ. ಹಲ್ಲಿಗಳ ಬೀಳುವಿಕೆ ಮತ್ತು ಅವು ಏನು ಸೂಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ

ಇದನ್ನೂ ಓದಿ: ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ ; ಅರ್ಜಿ ಸಲ್ಲಿಕೆ ಹೇಗೆ?

Vijayaprabha Mobile App free

Halli Shastra : ತಲೆಯ ಮೇಲೆ ಬಿದ್ದರೆ

ತಲೆಯ ಮೇಲೆ ಹಲ್ಲಿ ಬಿದ್ದರೆ, ಅದು ನಿಮಗೆ ಬರುವ ಕೆಟ್ಟ ಶಕುನವನ್ನು ಸೂಚಿಸಲಿದ್ದು, ನಿಮಗೆ ಕೆಟ್ಟ ಸಮಯ ಆರಂಭವಾಗಲಿದೆ ಎ೦ದು ಹಲ್ಲಿ ಎಚ್ಚರಿಕೆ ನೀಡುತ್ತದೆ. ಹೀಗೆ ಆದರೆ, ವ್ಯಕ್ತಿಯ ಸ೦ಬ೦ಧಿ ಅಥವಾ ಪರಿಚಯಸ್ಥರು ಸಾವನ್ನಪ್ಪಬಹುದು. ಅಲ್ಲದೆ, ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವಂತೆ ಆಗಬಹುದು.

Halli Shastra : ಹಣೆಯ ಮೇಲೆ ಬಿದ್ದರೆ

ಇನ್ನು, ಹಲ್ಲಿ ಹಣೆಯ ಮೇಲೆ ಬೀಳುವುದನ್ನು ಶುಭ ಶಕುನವೆಂದು ಹೇಳಲಾಗಿದೆ. ಶಾಸ್ತ್ರದ ಪ್ರಕಾರ ಹಣೆಯ ಎಡಭಾಗದಲ್ಲಿ ಬಿದ್ದರೆ ಕೀರ್ತಿ ಪ್ರಾಪ್ತಿಯಾಗುತ್ತದೆ ಮತ್ತು ಬಲ ಭಾಗದ ಮೇಲೆ ಬಿದ್ದರೆ ಲಕ್ಷ್ಮೀ ಕಟಾಕ್ಷ ಉಂಟಾಗುತ್ತದೆ. ಮುಖದ ಮೇಲೆ ಹಲ್ಲಿ ಬಿದ್ದರೆ ಮನೆಗೆ ಸ೦ಬ೦ಧಿಕರು ಬರುತ್ತಾರೆ ಎಂದು ಹೇಳಲಾಗುತ್ತದೆ.

ಹುಬ್ಬಿನ ಮೇಲೆ ಬಿದ್ದರೆ

ಹಲ್ಲಿಯು ಹುಬ್ಬಿನ ಮೇಲೆ ಬಿದ್ದರೆ, ಕೆಲಸ ಮಾಡುವ ಕಚೇರಿಯಲ್ಲಿ ಅಧಿಕಾರಿಗಳ ಸಹಾಯ ಲಭಿಸುತ್ತದೆ ಎ೦ಬ ನ೦ಬಿಕೆ ಇದೆ. ಹಲ್ಲಿ ಕಣ್ಣುಗಳ ಮೇಲೆ ಬಿದ್ದರೆ, ನೀವು ಯಾವುದೋ ಕಾರಣಕ್ಕಾಗಿ ಶಿಕ್ಷೆಗೆ ಒಳಗಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿನ ಅತಿ ಬಡ & ಶ್ರೀಮಂತ ಜಿಲ್ಲೆಗಳು! ಇಲ್ಲಿದೆ ಅಂಕಿ-ಅಂಶ

ಕೈ, ಕಾಲುಗಳ ಮೇಲೆ ಬಿದ್ದರೆ

ನಿಮ್ಮ ದೇಹದ ಬಲಗೈ ಅಥವಾ ಬಲ ಕಾಲಿನ ಮೇಲೆ ಹಲ್ಲಿ ಬಿದ್ದರೆ ಆ ದಿನ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರಬಹುದಾಗಿದ್ದು, ಕಾಲಿನ ಮೇಲೆ ಬಿದ್ದರೆ ಶೀಘ್ರದಲ್ಲಿಯೇ ವಿದೇಶ ಪ್ರವಾಸಕ್ಕೆ ತೆರಳುವ ಅವಕಾಶ ಸಿಗಲಿದೆ ಎಂಬ ನಂಬಿಕೆಯಿದೆ. ಹೊಕ್ಕುಳ ಪ್ರದೇಶದಲ್ಲಿ ಹಲ್ಲಿ ಬಿದ್ದರೆ ಚಿನ್ನ, ವಜ್ರ, ಸೇರಿದಂತೆ ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.

ಪಾದದ ಮೇಲೆ ಬಿದ್ದರೆ

ಪಾದಗಳ ಮೇಲೆ ಹಲ್ಲಿ ಬಿದ್ದರೆ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು ಎಂಬ ಸೂಚನೆಯಾಗಿದೆ. ಎಡಗಾಲಿನ ತೊಡೆಯ ಮೇಲೆ ಹಲ್ಲಿ ಬಿದ್ದರೆ, ನೀವು ನಿಮ್ಮ ಹೆತ್ತವರಿಗೆ ಅಂದರೆ ತ೦ದೆ ತಾಯಂದಿರಿಗೆ ದುಃಖವನ್ನುಂಟುಮಾಡುವ ಕೆಲಸವನ್ನು ಮಾಡುತ್ತೀರಿ ಎಂಬ ಅರ್ಥವಾಗಿದೆ.

ಎದೆಯ ಮೇಲೆ ಬಿದ್ದರೆ

ಎದೆಯ ಬಲಭಾಗದ ಮೇಲೆ ಹಲ್ಲಿ ಬಿದ್ದರೆ ಲಾಭ ಪ್ರಾಪ್ತಿಯಾಗುತ್ತದೆ. ಎದೆಯ ಎಡ ಭಾಗದ ಮೇಲೆ ಹಲ್ಲಿ ಬಿದ್ದರೆ ಸುಖ ಪ್ರಾಪ್ತಿಯಾಗುತ್ತದೆ. ಕುತ್ತಿಗೆಯ ಎಡ ಭಾಗದಲ್ಲಿ ಬಿದ್ದರೆ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಬಲ ಭಾಗದಲ್ಲಿ ಹಲ್ಲಿ ಬಿದ್ದರೆ ಸ೦ಬ೦ಧಿ ಅಥವಾ ಇತರೆ ವ್ಯಕ್ತಿಯೊಂದಿಗೆ ದ್ವೇಷ ಉಂಟಾಗುತ್ತದೆ ಎಂದು ನಂಬಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.