Gruhalakshmi yojana : ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ; ಈ ದಿನದಂದು 2 ತಿಂಗಳ ₹4000 ಹಣ ಜಮಾ!

Gruhalakshmi yojana : ಕೊನೆಗೂ ಯಜಮಾನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಾನಾ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ & ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಇದೇ ತಿಂಗಳ 7 & 9 ರಂದು…

Gruhalakshmi yojana

Gruhalakshmi yojana : ಕೊನೆಗೂ ಯಜಮಾನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಾನಾ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ & ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಇದೇ ತಿಂಗಳ 7 & 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದಾರೆ.

ಹೌದು, ಸತತ ಹನ್ನೊಂದು ತಿಂಗಳು ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳು ಪಡೆದಿದ್ದಾರೆ. ಸದ್ಯ ಕಳೆದ ಮೂರು ತಿಂಗಳಿನಿಂದ ಹಣ ಬಂದಿಲ್ಲ. ಆಯುಧ ಪೂಜೆ ವೇಳೆಗೆ ಹಣ ಜಮಾ ಆಗಲಿದೆ.

ಇದನ್ನೂ ಓದಿ: ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ; ನಾಳೆಯೇ ರೈತರ ಖಾತೆಗೆ ₹2,000..!?

Vijayaprabha Mobile App free

ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್, ನಾನಾ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ & ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಇದೇ ತಿಂಗಳ 7 & 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಈ ಬಾರಿ ಎರಡೂ ಕಂತಿನ ಹಣ ಹಾಕುತ್ತೇವೆ. ಕೆಲ ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ವಿಳಂಬವಾಗಿತ್ತು. ಯಾರೂ ಆತಂಕಪಡುವ ಅಗತ್ಯವಿಲ್ಲ. ಹಬ್ಬದ ವೇಳೆ ನಿಮ್ಮ ಕೈಗೆ ಹಣ ಸಿಗುತ್ತಿದ್ದು ಭರ್ಜರಿಯಾಗಿ ಹೋಳಿಗೆ ಊಟ ಸವಿಯಿರಿ’ಎಂದಿದ್ದಾರೆ.

ಇದನ್ನೂ ಓದಿ: 1 ಕೋಟಿ ಯುವಕರಿಗೆ ಮಾಸಿಕ 5,000; ಅರ್ಹತೆ, ಸ್ಟೈಪೆಂಡ್, ಪ್ರಯೋಜನಗಳ ಮಾಹಿತಿ ಇಲ್ಲಿದೆ!

ಈ ಸುದ್ದಿ ಕೇಳಿದ್ದೇ ತಡ ಯಜಮಾನಿಯರಲ್ಲಿ ನವರಾತ್ರಿ ಹಬ್ಬದ ಖುಷಿ ಇಮ್ಮಡಿಗೊಂಡಿದೆ. ಹಬ್ಬದ 5ನೇ ದಿನವಾದರೂ ಹಣ ಸಿಗುತ್ತದಲ್ಲಾ. ಹಬ್ಬವನ್ನು ಖುಷಿ-ಖುಷಿಯಾಗಿ ಆಚರಿಸಬಹುದಲ್ಲಾ ಎಂದು ಫಲಾನುಭವಿಗಳು ನಿಟ್ಟುಸಿರುಬಿಡುತ್ತಿದ್ದಾರೆ. ಹಬ್ಬಕ್ಕೂ ಮೊದಲು ಹಣ ಹಾಕಿ ಎಂದು ಮನೆ ಒಡತಿಯರು ಆಗ್ರಹಿಸಿದ್ದರು.

ಸದ್ಯ ಗೃಹಲಕ್ಷ್ಮಿಯ ಲಿಸ್ಟ್‌ನಿಂದ ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕಲಾಗುತ್ತಿದೆ. ಎರಡು ಲಕ್ಷ ಜನ ತೆರಿಗೆದಾರರಿದ್ದು ಅವರನ್ನು ತಂತ್ರಾಂಶದಿಂದ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಬಳಿಕ ಹಣ ರಿಲೀಸ್‌ ಆಗಲಿದೆ ಎಂದು ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.