ತಿರುವನಂತಪುರಂ : ರಾಜ್ಯದಲ್ಲಿ ಬುಗಿಲೆದ್ದಿದ್ದ ಹಿಜಾಬ್ ದೇಶದ ಹಲವು ರಾಜ್ಯಗಳಲ್ಲಿ ಹರಡಿದ್ದು, ಇದಕ್ಕೆ ಪಪ್ರತಿಕ್ರಿಯೆಯಾಗಿ ಮುಸ್ಲಿಂ ಯುವತಿಯರು ಹಿಜಾಬ್ ಧರಿಸುವುದನ್ನು ಸಮಾಜ ಒಪ್ಪಿಕೊಂಡರೆ ಅವರು ಮತ್ತೆ ಮನೆಗೆ ಸೀಮಿತರಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಪಾದಿಸಿದ್ದಾರೆ.
ಹೌದು, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮಾತನಾಡಿ, ಅರಬ್ ದೇಶಗಳಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಹೂತುಹಾಕಲಾಗುತ್ತಿತ್ತು. ಇದಕ್ಕೆ ಇಸ್ಲಾಮ್ ಪೂರ್ಣ ವಿರಾಮ ಹಾಕಿತು. ಆದರೆ ಜನರ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಮಹಿಳೆಯರ ಧಮನಕ್ಕಾಗಿ ತ್ರಿವಳಿ ತಲಾಖ್, ಹಿಜಾಬ್ ಸೇರಿ ಇತರೆ ರೂಢಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.