ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2.48 ಲಕ್ಷ ಕಾರ್ಮಿಕರ ಕಾರ್ಡುಗಳನ್ನು ರದ್ದು ಮಾಡಿದೆ! ಇದು ಸುಳ್ಳು ಮಾಹಿತಿ ನೀಡಿ ಕಾರ್ಡ್ ಮಾಡಿಸಿಕೊಂಡವರಿಗೆ ಶಾಕ್ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ 1,69,180, ಬೀದರ್ 25,000, ಶಿವಮೊಗ್ಗದಲ್ಲಿ 6,900, ಉತ್ತರ ಕನ್ನಡ 4155 ಸೇರಿದಂತೆ 2,48,987 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ವಿಶೇಷ ಕಾರ್ಯಾಚರಣೆಯಲ್ಲಿ ಈ ನಕಲಿ ಕಾರ್ಡ್ ಗಳು ಪತ್ತೆಯಾಗಿವೆ. ದಾಖಲಾತಿಗಳ ಪರಿಶೀಲನೆ ನಡೆಸಿ ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದ್ದು, ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಈ ರೀತಿ ಮಾಡಿದ್ದವರಿಗೆ ಶಾಕ್ ನೀಡಲಾಗಿದೆ.
ಮಂಡಳಿಯಲ್ಲಿ 18.49 ಲಕ್ಷ ಮಹಿಳೆಯರು, 27.83 ಲಕ್ಷ ಪುರುಷರು ಸೇರಿ 46.42 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಈ ಪೈಕಿ 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಸಾವಿರಾರು ಮಂದಿ ಸುಳ್ಳು ದಾಖಲೆ ಸೃಷ್ಟಿಸಿ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡಿರುವುದು ಇದರಿಂದಾಗಿ ಬಹಿರಂಗವಾಗಿದೆ.