ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. UIDAI ಇತ್ತೀಚೆಗೆ ಪ್ರಮುಖ ಘೋಷಣೆ ಮಾಡಿದ್ದು, ಆಧಾರ್ ಕಾರ್ಡ್‌ನಲ್ಲಿ ವಿವರಗಳನ್ನ ನವೀಕರಿಸಲು ಒಂದು ರೂಪಾಯಿ ಕೂಡ ಪಾವತಿಸುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ: ನೀವು SBI ಖಾತೆ ಹೊಂದಿದ್ದೀರಾ? ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕೇ? ಬ್ಯಾಂಕ್‌ಗೆ ಹೋಗದೆ ಹೀಗೆ ಮಾಡಿ..
ಹೌದು, ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಜೂನ್ 14ರವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಘೋಷಿಸಿದ್ದು, ಆಧಾರ್ ನವೀಕರಣ ಶುಲ್ಕವನ್ನು ಮನ್ನಾ ಮಾಡಲಾಗುತ್ತಿದೆ ತಿಳಿಸಿದೆ. ಈ ಸೌಲಭ್ಯ ಮೈಆಧಾರ್ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ.
ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ!
ಇದನ್ನು ಹೊರತುಪಡಿಸಿ ವಿವಿಧ ಕೇಂದ್ರಗಳಲ್ಲಿ ಆಧಾರ್ ವಿವರ ಪರಿಷ್ಕರಿಸಲು 50 ರೂ ಶುಲ್ಕ ವಿಧಿಸಲಾಗುತ್ತದೆ ಎಂದು ಯುಐಡಿಎಐ ಹೇಳಿದೆ. ನಿಯಮದ ಪ್ರಕಾರ ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷ ಪೂರ್ಣಗೊಂಡ ಬಳಿಕ ಕನಿಷ್ಠ ಒಂದು ಬಾರಿ ಪರಿಷ್ಕರಿಸಬೇಕಿದೆ. ಇದಲ್ಲದೆ, ಈ ಪ್ರಯೋಜನವು ಮುಂದಿನ ಮೂರು ತಿಂಗಳ ಅವಧಿಗೆ ಜೂನ್ 14ರವರೆಗೆ ಮಾತ್ರ ಲಭ್ಯವಿರುತ್ತದೆ.
ಇದನ್ನು ಓದಿ: ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!