ಹಿಂದೂ ಕ್ಯಾಲೆಂಡರ್‌ನ ಹೊಸ ವರ್ಷ ಯುಗಾದಿ ಹಬ್ಬ (Ugadi festival) ಯಾವಾಗ ಅನ್ನುವ ಚರ್ಚೆಯಿದ್ದು, ಚಾಂದ್ರಮಾನ ಪಂಚಾಂಗವನ್ನು ಅನುಸರಿಸುವ ಕನ್ನಡ ಮತ್ತು ತೆಲುಗು ಜನರಿಗೆ 2023 ಯುಗಾದಿ ಹಬ್ಬದ ದಿನಾಂಕವು ಮಾರ್ಚ್ 22, 2023ರಂದು ಇದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ಈ ಯುಗಾದಿ ಹಬ್ಬವು (Ugadi festival) ವಸಂತ ಋತುವಿನ ಆರಂಭವನ್ನು ಸೂಚಿಸುವುದಲ್ಲದೆ, ಭಾರತದಾದ್ಯಂತ ವಿವಿಧ ಹೆಸರುಗಳು, ಆಚರಣೆಗಳು, ನಂಬಿಕೆಗಳು ಮತ್ತು ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ. ಹೀಗಾಗಿ ವರ್ಷದ ಮೊದಲ ದೊಡ್ಡ ಹಬ್ಬ ಯುಗಾದಿಗೆ ಇನ್ನೊಂದೇ ವಾರ ಉಳಿದಿದೆ.
ಇದನ್ನು ಓದಿ: WPL 2023: ಪೆರ್ರಿ, ಡಿವೈನ್ ಮ್ಯಾಜಿಕ್, ಕನಿಕಾ, ರಿಚಾ ಅದ್ಬುತ ಬ್ಯಾಟಿಂಗ್; ಆರ್‌ಸಿಬಿಗೆ ಭರ್ಜರಿ ಗೆಲುವು
ಅಂದು ಏನೆಲ್ಲಾ ಮಾಡಬೇಕು
ಯುಗಾದಿ ಹಬ್ಬದಂದು ಮನೆಯಲ್ಲಿ ಹಿರಿಯ ಮಹಿಳೆಯರು ಮಂತ್ರಗಳನ್ನು ಪಠಿಸಬೇಕು ಎನ್ನುತ್ತಾರೆ ಜ್ಯೋತಿಷಿಗಳು. ಯುಗಾದಿ ದಿನದಂದು ಮಾಡಬೇಕಾದ ಪ್ರಮುಖ ಕೆಲಸಗಳಲ್ಲಿ ಎಣ್ಣೆ ಸ್ನಾನ ಕೂಡ ಒಂದು.
ಪಂಚಾಂಗವನ್ನೂ ಕೇಳಬೇಕು. ಯುಗಾದಿ ಪರ್ವದಿನಾನ ಗಣಪತಿ ಪೂಜೆ, ಉಮಾಮಹೇಶ್ವರ ಪೂಜೆ, ಲಕ್ಷ್ಮೀ ಪೂಜೆ, ನಾರಾಯಣ ಪೂಜೆ, ಶಚಿ ಇಂದ್ರ ಪೂಜೆ, ಅರುಂಧತಿ ವಸಿಷ್ಠ ಪೂಜೆ ಇತ್ಯಾದಿಗಳನ್ನು ಮಾಡಿದರೆ ಕರ್ಮಫಲದಿಂದ ಮುಕ್ತಿ ಪಡೆಯಬಹುದು ಎಂಬುದು ಹಿಂದಿನಿಂದ ನಡೆದು ಬಂದ ಮಾತಾಗಿದೆ. ಈ ಬಾರಿ ಯುಗಾದಿ ಮಾರ್ಚ್ 22ರಂದು ಬಂದಿದೆ.
ಇದನ್ನು ಓದಿ: ಈ ವರ್ಷದಲ್ಲಿ ಒಟ್ಟು 4 ಗ್ರಹಣ: ಈ ವರ್ಷದ ಮೊದಲ ʻಚಂದ್ರಗ್ರಹಣʼ ಯಾವಾಗ ಸಂಭವಿಸಲಿದೆ..? ಇಲ್ಲಿದೆ ನೋಡಿ