ಭಾಗ್ಯಲಕ್ಷ್ಮಿ ಬಾಂಡ್ ಪಡೆದವರಿಗೆ ಭರ್ಜರಿ ಸಿಹಿ ಸುದ್ದಿ; ಖಾತೆಗೆ ಒಂದೂವರೆ ಲಕ್ಷ, 1 ಲಕ್ಷ 80 ಸಾವಿರ!

Bhagyalakshmi Bond: ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಮೆಚ್ಯುರಿಟಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ (Beneficiaries) ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಫಲಾನುಭವಿಗಳಿಗೆ ಹಣ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್…

Bhagyalakshmi Bond

Bhagyalakshmi Bond: ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಮೆಚ್ಯುರಿಟಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ (Beneficiaries) ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಫಲಾನುಭವಿಗಳಿಗೆ ಹಣ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ನೀಡಿದ್ದಾರೆ.

ಹೌದು, ರಾಜ್ಯದಲ್ಲಿ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಇದೀಗ ರಾಜ್ಯದ 2.30 ಲಕ್ಷ ಜನರನ್ನು ತುಲುಪಿದೆ. ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯನ್ನು ಪರಿಚಯಿಸಿದ್ದರು.

ಇವರಿಗೆ ಒಂದೂವರೆ ಲಕ್ಷ, 1 ಲಕ್ಷ 80 ಸಾವಿರ

ಈ ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 19 ವಯಸ್ಸಿಗೆ ವಿದ್ಯಾಭ್ಯಾಸಕ್ಕೆ ಒಂದೂವರೆ ಲಕ್ಷ, 21 ವಯಸ್ಸಿಗೆ ಬೇಕಾದ್ರೆ 1 ಲಕ್ಷ 80 ಸಾವಿರ ಹಣ ಕೊಡುತ್ತೇವೆ. ಈಗ 2 ಲಕ್ಷ ಫಲಾನುಭವಿಗಳಿಗೆ ಹಣ ಕೊಡುವುದಕ್ಕೆ ತಯಾರಿ ಆಗಿದೆ. ಇಲಾಖೆಯಿಂದ ಶೀಘ್ರದಲ್ಲೇ ಬಾಂಡ್ ಕೊಡುವ ಕಾರ್ಯಕ್ರಮ ಆಗುತ್ತೆ. ಸರ್ಕಾರಗಳು ಬದಲಾಗುತ್ತವೆ, ಆದರೆ ಯೋಜನೆ ಉಳಿದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.

Vijayaprabha Mobile App free

ಇದನ್ನು ಓದಿ: ಕೃಷಿ ಜಮೀನಿಗೆ ದಾರಿಗಾಗಿ ಒದ್ದಾಡುವ ರೈತರಿಗೆ ಗುಡ್ ನ್ಯೂಸ್..!

Bhagyalakshmi Bond: ಭಾಗ್ಯಲಕ್ಷ್ಮೀ ಯೋಜನೆಗೆ ಅರ್ಹರು ಯಾರು?

ರಾಜ್ಯದಲ್ಲಿ 2006 -2007ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಇದೀಗ ರಾಜ್ಯದ 2.30 ಲಕ್ಷ ಜನರನ್ನು ತುಲುಪಿದ್ದು,ಮೊದಲ ಹಂತದಲ್ಲಿ ಈ ಯೋಜನೆಯಲ್ಲಿ ನೋಂದಣಿಯಾಗಿದ್ದವರಿಗೆ ಈಗ ಮೆಚ್ಯೂರಿಟಿ ಹಣ ತಲುಪಲಿದೆ.

ಹೌದು, ಈ ಯೋಜೆನೆಗೆ 18 ವರ್ಷಗಳ ಹಿಂದೆ ನೋಂದಣಿ ಮಾಡಿಸಿದವರಿಗೆ ಏಪ್ರಿಲ್ & ಮೇ ತಿಂಗಳ ಅಂತ್ಯಕ್ಕೆ ಮೆಚ್ಯುರಿಟಿಗೆ ಅರ್ಹರಾಗಿದ್ದು, ಅತೀ ಶೀಘ್ರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

ಇನ್ನು, ಈ ಮೊದಲು ಭಾಗ್ಯಲಕ್ಷ್ಮಿ ಅಂತ ಇದ್ದ ಯೋಜನೆ ಈಗ ಸಮೃದ್ಧಿ ಯೋಜನೆಯಾಗಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರವು ಅಂಚೆ ಇಲಾಖೆಗೆ ವರ್ಗಾಯಿಸಿದೆ.

ಇದನ್ನು ಓದಿ: HSRP ನಂಬರ್‌ಪ್ಲೇಟ್ ಅಳವಡಿಸಲು ಸೆ.15 ಕೊನೆ ದಿನ; ಅಳವಡಿಸದಿದ್ದರೇ 1,000 ರೂವರೆಗೆ ದಂಡ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.