3 ದಿನಗಳಿಂದ ಕುಸಿತವಾಗಿದ್ದ ಚಿನ್ನದ ಬೆಲೆ ಇಂದು 270 ರೂ ಹೆಚ್ಚಳವಾಗಿದ್ದು, ಬೆಳ್ಳಿಯ ಬೆಲೆ 200 ರೂ ಏರಿಕೆಯಾಗಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,650 ರೂ ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 50,890 ರೂ ಆಗಿದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 47,220 ರೂ. ಮುಂಬೈ- 46,650 ರೂ, ದೆಹಲಿ- 46,800 ರೂ, ಬೆಂಗಳೂರು- 46,700 ರೂ, ಹೈದರಾಬಾದ್- 46,650 ರೂ ದಾಖಲಾಗಿದೆ.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆ..!
ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ರಾಜ್ಯದಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ. ಕೆಲವೊಂದು ಜಿಲ್ಲೆಗಳಲ್ಲಿ ಕೆಲವು ಪೈಸೆಗಳಷ್ಟು ಅಲ್ಪ ಏರಿಳಿತವಾಗಿದ್ದು, ರಾಜ್ಯದ ಪ್ರಮುಖ
ಜಿಲ್ಲೆಗಳಲ್ಲಿ ಇಂದಿನ ತೈಲ ದರ ಹೀಗಿದೆ.
ಬೆಂಗಳೂರು -101.94 ರೂ, ಬೆಳಗಾವಿ – 102.38 (31 ಪೈಸೆ ಇಳಿಕೆ) ರೂ, ದಕ್ಷಿಣ ಕನ್ನಡ – 101.21 (8 ಪೈಸೆ ಏರಿಕೆ) ರೂ, ಮೈಸೂರು – 102.17 (67 ಪೈಸೆ ಏರಿಕೆ) ರೂ ಇದ್ದು, ಡಿಸೇಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದೆ ಯತಾಸ್ಥಿತಿಯಲ್ಲಿದೆ.