ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸಬೇಕು ಎಂದುಕೊಂಡಿದ್ದವರಿಗೆ ಆಘಾತ ಎದುರಾಗಿದೆ. ಹೌದು, ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ, ಬೆಳ್ಳಿಯ ದರ ಭಾನುವಾರ ಬೆಳಗ್ಗೆ ಏರಿಕೆಯಾಗಿದೆ.
22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 750 ರೂ ಏರಿಕೆಯಾಗಿ 47,000 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 830 ರೂ ಹೆಚ್ಚಳವಾಗಿ 51,280 ರೂ ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 1550 ರೂ ಹೆಚ್ಚಳವಾಗಿ 57,700 ರೂ ಆಗಿದೆ.
ಇನ್ನು, ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 47,050 ರೂ ಆಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದ್ದು, ಚೆನ್ನೈ- 47,400 ರೂ, ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000, ಬೆಂಗಳೂರು- 47,050 ರೂ ದಾಲಾಗಿದೆ