Gold Price Crash : ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದ ರಾಜ್ಯದ ಜನತೆಗೆ ಇದೊಂದು ಸಿಹಿಸುದ್ದಿ ಸಿಕ್ಕಿದ್ದು, ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಬಂಗಾರದ ದರದಲ್ಲಿ ಇಂದು (ಶುಕ್ರವಾರ) ಭಾರೀ ಕುಸಿತ ಕಂಡಿದೆ. ಹೌದು, ಒಂದೇ ದಿನದಲ್ಲಿ ಚಿನ್ನದ ಬೆಲೆ ಸುಮಾರು ₹5,000 ಕ್ಕೂ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹20,000 ಕುಸಿತವಾಗಿದೆ.
ಇದನ್ನೂ ಓದಿ: New Ration Card | ನಿಮ್ಮ ಬಳಿ ‘ಈ’ ಒಂದು ಕಾರ್ಡ್ ಇದ್ಯಾ? ಹಾಗಿದ್ರೆ ಹೊಸ ರೇಷನ್ ಕಾರ್ಡ್‌ಗೆ ಇಂದೇ ಅರ್ಜಿ ಹಾಕಿ!
Gold price today | ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ವಿವರ ಇಲ್ಲಿದೆ:

ಇಂದಿನ ಚಿನ್ನದ ದರ (Gold Rate Today)
24 ಕ್ಯಾರೆಟ್ (ಶುದ್ಧ ಚಿನ್ನ): ಹೂಡಿಕೆದಾರರಿಗೆ ಖುಷಿ ಸುದ್ದಿಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹5,020 ಇಳಿಕೆಯಾಗಿದ್ದು, ಇದರೊಂದಿಗೆ ಇಂದಿನ ದರ ₹1,54,420 ಕ್ಕೆ ತಲುಪಿದೆ.
22 ಕ್ಯಾರೆಟ್ (ಆಭರಣ ಚಿನ್ನ): ಆಭರಣ ಪ್ರಿಯರು ಹೆಚ್ಚು ಖರೀದಿಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹4,600 ಇಳಿಕೆಯಾಗಿದ್ದು, ಸದ್ಯ 10 ಗ್ರಾಂ ಚಿನ್ನದ ಬೆಲೆ ₹1,41,550 ಆಗಿದೆ.
18 ಕ್ಯಾರೆಟ್ ಚಿನ್ನ: ಇನ್ನು, ಮಧ್ಯಮ ವರ್ಗದವರು ಹೆಚ್ಚಾಗಿ ಬಳಸುವ 18 ಕ್ಯಾರೆಟ್ ಚಿನ್ನದ ದರದಲ್ಲೂ ₹3,760 ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನಕ್ಕೆ ₹1,15,820 ದರ ನಿಗದಿಯಾಗಿದೆ.
ಇದನ್ನೂ ಓದಿ: Gold karat: 24, 22, 18 ಚಿನ್ನದ ಕ್ಯಾರೆಟ್‌ಗಳ ವ್ಯತ್ಯಾಸವೇನು? ಚಿನ್ನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ (Silver Price Crash)
ಅಷ್ಟೇ ಅಲ್ಲ, ಚಿನ್ನಕ್ಕಿಂತಲೂ ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ ಕಂಡಿದ್ದು, ಪ್ರತಿ ಕೆ.ಜಿ ಬೆಳ್ಳಿ ದರದಲ್ಲಿ ಬರೋಬ್ಬರಿ ₹20,000 ಕಡಿಮೆಯಾಗಿದ್ದು, ಈ ಮೂಲಕ ಇಂದಿನ ಬೆಳ್ಳಿ ದರ ₹3,00,000 (ಮೂರು ಲಕ್ಷ) ರೂಪಾಯಿಗಳಾಗಿದೆ.
ಗಮನಿಸಿ: ಮೇಲೆ ನೀಡಲಾದ ದರಗಳು ಬೆಂಗಳೂರಿನ ಮಾರುಕಟ್ಟೆಯನ್ನು ಆಧರಿಸಿದ್ದು, ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳು (Making Charges) ಆಯಾ ಜುವೆಲ್ಲರಿ ಅಂಗಡಿಗಳಿಗೆ ಅನುಗುಣವಾಗಿ ಬದಲಾಗಬಹುದು.




