Ganesha: ಗಣಪತಿ ಬಪ್ಪ ಮೋರ್ಯ ಎಂಬ ಘೋಷಣೆಯಲ್ಲಿ ಬಪ್ಪ ಎಂದರೆ ತಂದೆ ಎಂದರ್ಥ. ‘ಮೋರಿಯಾ’ ಎಂಬುದಕ್ಕೆ ಎರಡು ಅರ್ಥಗಳಿವೆ. ಮರಾಠಿಯಲ್ಲಿ “ಮ್ಹೋರ್, ಯಾ” ಎಂದರೆ “ಮುಂದಕ್ಕೆ, ಬಾ” ಎಂದರ್ಥ. ಇದನ್ನು “ಮುಂದಕ್ಕೆ ಬಾ ಮತ್ತು ನಮ್ಮ ಮೇಲೆ ಕರುಣಿಸು” ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.
“ಮೋರಿಯಾ” ಎಂದರೆ ಅಡೆತಡೆಗಳನ್ನು ನಿವಾರಿಸುವವನು ಎಂಬ ಅರ್ಥವೂ ಇದೆ. ಅಲ್ಲದೆ ಕರ್ನಾಟಕ ಮೂಲದ ಭಕ್ತನಾದ ‘ಮೋರ್ಯ ಗೋಸಾವಿ’ಗೆ ಗಣೇಶ ನೀಡಿದ ವರದಾನದಿಂದಾಗಿ ಗಣಪತಿಯಿಂದ ಆತನ ಹೆಸರು ಬೇರ್ಪಡಬಾರದು ಎಂಬ ಕಥೆಯೂ ಹರಿದಾಡುತ್ತಿದೆ.
ಗಣೇಶನ ನಿಜವಾದ ತಲೆ ಎಲ್ಲಿದೆ ಗೊತ್ತಾ?
ಗಣೇಶನ ಶಿರಚ್ಛೇದ ಮಾಡಿದಾಗ ತಲೆ ಉತ್ತರಾಖಂಡದ ಪಿಥೋರಗಢದ, ಪಾತಾಳ ಭುವನೇಶ್ವರ ಎಂಬ ಗುಹೆಯಲ್ಲಿ ಬಿದ್ದಿದೆ ಎಂಬ ನಂಬಿಕೆಯಿದೆ. ಪುರಾಣಗಳು ಹೇಳುವಂತೆ ಆ ತಲೆ ಇನ್ನು ಗುಹೆಯಲ್ಲಿದ್ದು ಕಲ್ಲಿನ ರೂಪ ಪಡೆದುಕೊಂಡಿದೆಯಂತೆ.
ಜನ ನಿತ್ಯ ಅದನ್ನು ಪೂಜೆ ಮಾಡುತ್ತಾರೆ. ಈ ಗಣೇಶನ ತಲೆಯನ್ನು ಶಿವ ಪರಮಾತ್ಮನೆ ಕಾಯುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ ಅಷ್ಟೇ ಅಲ್ಲದೆ ತಲೆಯ ಪಕ್ಕದಲ್ಲ ಒಂದು ಬ್ರಹ್ಮ ಕಮಲವನ್ನು ಕೂಡ ದೈವಿಕ ರೂಪದಲ್ಲಿ ಕಾಣಬಹುದು.
https://vijayaprabha.com/how-did-public-ganesha-festivals-start-in-india/