ದಾವಣಗೆರೆ: ಎಪಿಎಂಸಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ವಿರುದ್ದ ಪಕ್ಷಗಳು, ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿ ಕರ್ನಾಟಕ ಬಂದ್ ಸೂಚನೆ ನೀಡಿದ್ದಾರೆ. ಈ ಕುರಿತು ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರು ಇಂದು ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಜಿ ಶಾಸಕ ವೈ ಎಸ್ ವಿ ದತ್ತಾ ಅವರು ಬಂದ್ ತಾರ್ಕಿಕ ಅಂತ್ಯ ಕಾಣುತ್ತೋ, ಇಲ್ಲವೋ ಬೇರೆ ವಿಚಾರ, ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರ ಕೆಲಸ ಮಾಡುತ್ತಿದೆ. ಇದೆ ಕಾರಣಕ್ಕೆ ಬಂದ್ ಮಾಡುವ ಅಗತ್ಯ ಇದೆ. ಆದರೆ ಈಗಿನ ಹೋರಾಟ ನಿತೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಗೋಕಾಕ್ ಚಳುವಳಿ, ರೈತ ಚಳುವಳಿಗಳು ಇದ್ದವು. ಇಡೀ ಸರ್ಕಾರವನ್ನು ಬದಲಿಸುವ ಶಕ್ತಿ ಆ ಚಳುವಳಿಗೆ ಇತ್ತು. ಆದರೆ ಇತ್ತೀಚಿಗೆ ಅಂತಹ ಚಳುವಳಿ ಕಡಿಮೆಯಾಗುತ್ತಿವೆ ಎಂದು ದಾವಣಗೆರೆಯಲ್ಲಿ ಮಾಜಿ ಶಾಸಕ ವೈ ಎಸ್ ವಿ ದತ್ತಾ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿ; ನಾಡಿನ ರೈತರನ್ನು ಸರ್ಕಾರ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ: ಸಿದ್ದರಾಮಯ್ಯ