onion price: ಗ್ರಾಹಕರಿಗೆ ಮತ್ತೊಂದು ಶಾಕ್‌; ಟೊಮೆಟೊ ಆಯ್ತು, ಈಗ ಈ ಬೆಳೆಗೆ ಬಂಪರ್ ಬೆಲೆ!?

Onion price Onion price

onion price: ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಸದ್ದಿಲ್ಲದೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ವಾರದ ಹಿಂದೆ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡಿತ್ತು. ಬೆಂಗಳೂರಿನ ಕೆ.ಆರ್​ ಮಾರ್ಕೆಟ್​ನಲ್ಲಿ ವಾರದ ಹಿಂದೆ 25 ರೂ.ಇದ್ದ ಕೆಜಿ ಈರುಳ್ಳಿ, ಈಗ 30- 40 ರೂ. ಆಗಿದೆ. ಇನ್ನು 80 -100 ರೂ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದ್ದು, ಶ್ರಾವಣ ಮಾಸದ ಆರಂಭದಲ್ಲಿ ಗ್ರಾಹಕರಿಗೆ ಶಾಕ್‌ ಆಗಿದೆ.

Onion price
Onion price

ಇದನ್ನು ಓದಿ: ಮುಂದಿನ ನಾಲ್ಕು ದಿನ ಭಾರಿ ಮಳೆ; ಐಎಂಡಿ ಕೊಟ್ಟ ಎಚ್ಚರಿಕೆ ಸಂದೇಶವೇನು!?

onion price: ಈರುಳ್ಳಿ, ಬೆಳ್ಳುಳ್ಳಿ ದರ ದಿಢೀರ್‌ ಏರಿಕೆ

ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಟೊಮೆಟೊ ಹೊರತುಪಡಿಸಿ ಈರುಳ್ಳಿ ಹಾಗೂ ಇತರ ತರಕಾರಿಗಳ ಬೆಲೆಯೂ ಗಗನಮುಖಿಯಾಗುತ್ತಿದೆ. ಇದೀಗ ವಾರದ ಹಿಂದೆ 25 ರೂ.ಇದ್ದ ಕೆಜಿ ಈರುಳ್ಳಿ, ಈಗ 30- 40 ರೂ. ಆಗಿದೆ. ಬೆಳ್ಳುಳ್ಳಿ ರೇಟ್‌ KGಗೆ ₹170 ದಾಟಿದ್ದು, ಕೆಲ ನಗರಗಳಲ್ಲಂತೂ ₹180ಕ್ಕೆ ತಲುಪಿದೆ.

Advertisement

ಸದ್ಯ ಬೆಂಗಳೂರಿನಲ್ಲಿ KG ಬೆಳ್ಳುಳ್ಳಿ ₹160, ಬಿಹಾರದಲ್ಲಿ ₹172, ಕೋಲ್ಕತ್ತಾದಲ್ಲಿ ಪ್ರತಿ KGಗೆ ₹178ಕ್ಕೆ ಮಾರಾಟವಾಗುತ್ತಿದ್ದು, ಆದರೆ ಮೂರ್ನಾಲ್ಕು ತಿಂಗಳ ಹಿಂದೆ KGಗೆ ₹60-₹80ಯಷ್ಟೇ ಇತ್ತು. ಇಡೀ ದೇಶಕ್ಕೆ ಬೆಳ್ಳುಳ್ಳಿ MPಯಿಂದಲೇ ಪೂರೈಕೆಯಾಗುತ್ತದೆ.

ಬೆಲೆ ಏರಿಕೆಗೆ ಕಾರಣವೇನು?

ಮುಂಗಾರು ಮಳೆ ಕೈಕೊಟ್ಟ ಕಾರಣ ಕರ್ನಾಟಕದಲ್ಲಿ ಈರುಳ್ಳಿ ಲಭ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆಯಿಂದಾಗಿ ಬೆಲೆ ಏರಿಕೆ ಕಂಡಿದೆ. ಕೆಜೆ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಕ್ರಾಫ್ಟ್ ಬರುವವರಿಗೂ ಇದೆ ಬೆಲೆ ಮುಂದುವರಿಯಲಿದೆ. ಭಾರೀ ಮಳೆ ಪರಿಣಾಮ ಚಿತ್ರದುರ್ಗ & ದಾವಣಗೆರೆಯಲ್ಲಿ ಈರುಳ್ಳಿ ಬೆಳೆ ನೆಲ ಕಚ್ಚಿದ್ದೇ ಪ್ರಮುಖ ಕಾರಣ. ನೆರೆ ರಾಜ್ಯಗಳಿಂದಲೂ ಸರಬರಾಜಾಗುತ್ತಿಲ್ಲ ಎನ್ನಲಾಗುತ್ತಿದೆ.

ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಗೊತ್ತಾ? ಹೀಗೆ ತಿಳಿದುಕೊಳ್ಳಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement