ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಮೂರು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆಯಾಗಿದ್ದು, ಗ್ರಾಂ ಗೆ 220ರೂ ಇಳಿಕೆಯಾಗಿ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ್ದು, ಇತ್ತ ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದ್ದು,400 ರೂ. ಕುಸಿತವಾಗಿದೆ.
ಹೌದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹200 ಇಳಿಕೆಯಾಗಿ ₹47,600 ಇದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹220 ಕಡಿಮೆಯಾಗಿ ₹51,930 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹400 ಇಳಿಕೆಯಾಗಿ ₹55,200 ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹200 ಕಡಿಮೆಯಾಗಿ ₹47,600 ಆಗಿದ್ದು, 24 ಕ್ಯಾ. ಚಿನ್ನದ ದರ 10 ಗ್ರಾಂಗೆ ₹220 ಇಳಿಕೆಯಾಗಿ ₹51,980 ದಾಖಲಾಗಿದೆ.