pm svanidhi scheme: ದೇಶದಲ್ಲಿ ದುಡಿಯುವ ಜನರಿಗಾಗಿ ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಲೇ ಇದೆ. ಅದರಂತೆ ಪಿಎಂ ಸ್ವನಿಧಿ ಯೋಜನೆಯಲ್ಲಿ (pm svanidhi scheme) ಬೀದಿ ಬದಿ ವ್ಯಾಪಾರಿಗಳಿಗೆ (street vendors) 50 ಸಾವಿರ ಹಣ ಉಚಿತವಾಗಿ ಕೇಂದ್ರ ಸರ್ಕಾರದಿಂದ (Central Govt) ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಸ್ಕೀಮ್ ನಿಂದ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಉತ್ತಮವಾದಂತಹ ಅವಕಾಶವಾಗಿದೆ.
ಇದನ್ನು ಓದಿ: NPCIL ನಲ್ಲಿ 325 ಹುದ್ದೆಗಳಿಗೆ ಅರ್ಜಿ ಅಹ್ವಾನ; BE, BTch, BSc ಆದವರು ಅರ್ಜಿ ಸಲ್ಲಿಸಿ
ಹೌದು, ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ದೇಶವೇ ವಿವಿಧ ಸಮಸ್ಯೆಗಳಿಂದ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಹಲವಾರು ದುಡುಯುವ ವರ್ಗದ ಜನರು ತತ್ತರಿಸಿ ಹೋಗಿದ್ದರು. ಕರೋನ ಕಾರಣದಿಂದ ಬೀದಿಬದಿ ವ್ಯಾಪಾರಿಗಳು ಬೀದಿಗೆ ಬೀಳುವಂತ ಪರಿಸ್ಥಿತಿ ಎದುರಾಯಿತು. ಇಂಥ ಸಮುದಾಯದವರು ಮತ್ತೆ ಬದುಕು ಕಟ್ಟಿಕೊಳ್ಳಲು 2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಪಿಎಂ ಸ್ವನಿಧಿ ಯೋಜನೆ.
ಪಿಎಂ ಸ್ವನಿಧಿ ಯೋಜನೆಯಲ್ಲಿ (pm svanidhi scheme) ಬೀದಿ ಬದಿ ವ್ಯಾಪಾರಿಗಳು (street vendors) 50 ಸಾವಿರ ರೂವರೆಗೂ ಸಾಲ ಪಡೆಯಬಹುದಾಗಿದ್ದು, ಈ ಯೋಜನೆಯಲ್ಲಿ ಮೊದಲಿಗೆ ಪ್ರತಿಯೊಬ್ಬ ವ್ಯಾಪಾರಿಗೂ 10 ಸಾವಿರ ರೂ ಸಾಲ ಎಂದು ಘೋಷಿಸಲಾಯಿತು. ನಂತರ ಹಂತ ಹಂತವಾಗಿ ಷರತ್ತುಗಳ ಆಧಾರದ ಮೇಲೆ ಈ ಯೋಜನೆಯಡಿ ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಗಳ 50 ಸಾವಿರ ರೂ ವರೆಗೆ ಸಾಲವನ್ನು ಸರ್ಕಾರ ಕೊಡುತ್ತಿದೆ.
ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ 2024 ರ ಡಿಸೆಂಬರ್ ವರಗೆ ವಿಸ್ತರಣೆ:
ಇತ್ತೀಚಿಗೆ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (pm svanidhi scheme) 2024 ರ ಡಿಸೆಂಬರ್ ವರಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ದಿ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಹೌದು, ಲೋಕಸಭೆಯಲ್ಲಿ ಸಂಸದರೊಬ್ಬರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ ಸಚಿವರು ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ 2 ವರ್ಷ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!
ಈ ಯೋಜನೆಯಡಿ 3 ಬಾರಿ ಸಾಲ ಪಡೆಯುವ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಪಿ ಎಂ ಸ್ವನಿದಿ ಯೋಜನೆಯಡಿ (pm svanidhi scheme) ಮೊದಲ ಸಾಲವಾಗಿ ಹತ್ತು ಸಾವಿರ ರೂಪಾಯಿ, 2 ನೇ ಸಾಲವಾಗಿ 20 ಸಾವಿರ ರೂಪಾಯಿಗಳು ಹಾಗೂ 3 ನೇ ಸಾಲವಾಗಿ 50 ಸಾವಿರ ರೂಪಾಯಿಯವರೆಗೆ ಸಾಲ ಪಡೆಯುವ ಅವಕಾಶ ಕಲ್ಪಸಲಾಗಿದೆ.
ಪಿಎಂ ಸ್ವನಿಧಿ ಯೋಜನೆಯಲ್ಲಿ 50 ಸಾವಿರ ರೂ ಸಾಲ ಹೇಗೆ ಪಡೆಯುವುದು?
ಪಿಎಂ ಸ್ವನಿಧಿ ಸ್ಕೀಮ್‌ನಲ್ಲಿ ಮೊದಲ ಬಾರಿಗೆ ಸಾಲ ಪಡೆಯುವಾಗ ಸಿಗುವುದು 10 ಸಾವಿರ ರೂ ಮಾತ್ರ ಅವಕಾಶವಿದ್ದು, ಒಂದು ವರ್ಷದವರೆಗೆ ಈ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ನಂತರ 2 ನೇ ಸಾಲವಾಗಿ 20 ಸಾವಿರ ರೂಪಾಯಿಗಳು ಹಾಗೂ 3 ನೇ ಸಾಲವಾಗಿ 50 ಸಾವಿರ ರೂಪಾಯಿಯವರೆಗೆ ಹೆಚ್ಚಿಸಲು ನಿರ್ಧರಿಸಿದೆ.
ಈಗ ಮೊದಲು ಪಡೆದ ಸಾಲವನ್ನು ಒಂದು ವರ್ಷದಲ್ಲಿ ತೀರಿಸಿದವರು ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆಗ ಅವರಿಗೆ 2 ನೇ ಸಾಲವಾಗಿ 20 ಸಾವಿರ ರೂ ಪಡೆಯುವ ಅವಕಾಶ ಇರುತ್ತದೆ. ಈ ಸಾಲವನ್ನು ಎರಡನೇ ವರ್ಷದಲ್ಲಿ ಮರುಪಾವತಿಗೆ ಮಾಡಿದ ನಂತರ, ಮೂರನೇ ವರ್ಷದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ 50 ಸಾವಿರ ರೂ ಸಾಲ ನೀಡಲಾಗುವುದು. ಈ ಸಾಲಕ್ಕೆ ವಾರ್ಷಿಕ ಶೇ.7 ಮಾತ್ರ ಬಡ್ಡಿ ದರ (interest rate) ಇರುತ್ತದೆ. ನೀವು ತಿಂಗಳಿಗೆ ಆನ್‌ಲೈನ್‌ನಲ್ಲೇ ಸಾಲದ ಕಂತು ಕಟ್ಟಿದರೆ ಬಡ್ಡಿಯಲ್ಲೂ ಸಬ್ಸಿಡಿ ಸಿಗುವುದಲ್ಲದೆ ವಿವಿಧ ಸಬ್ಸಿಡಿ, ರಿಬೇಟ್ ಇತ್ಯಾದಿ ಗಣಿಸಿದರೆ ಪಿಎಂ ಸ್ವನಿಧಿ ಸಾಲ ಬಹುತೇಕ ಬಡ್ಡಿ ರಹಿತ ಸಾಲವಾಗುತ್ತದೆ.
ಪಿಎಂ ಸ್ವನಿಧಿ ಯೋಜನೆಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಬೀದಿ ಬದಿ ವ್ಯಾಪಾರಿ ನೀವಾಗಿದ್ದರೆ ಸ್ವನಿಧಿ ಸ್ಕೀಮ್‌ಗೆ ಅರ್ಜಿ ಸಲ್ಲಿಸಲು ಮೊದಲು ಎಸ್‌ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ನಿಮ್ಮ ಖಾತೆ ಇರುವ ಯಾವುದಾದರೂ ಸರ್ಕಾರಿ ಬ್ಯಾಂಕ್‌ಗೆ ಹೋಗಿ, ಅಲ್ಲಿ ಸಿಗುವ ಎಸ್ ಲೋನ್ ಅರ್ಜಿಯನ್ನು ಭರ್ತಿ ಮಾಡಿ, ಆಧಾರ್ ಕಾರ್ಡ್‌ನ (Aadhar card) ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ಆಗ, ಬ್ಯಾಕಿನಿಂದ (Bank) ನೀವು ಸಲ್ಲಿಸಿದ ಸಾಲದ ಅರ್ಜಿಗೆ (loan application) ಅನುಮೋದನೆ ಸಿಕ್ಕ ಬಳಿಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಇದನ್ನು ಓದಿ: ನಿಮ್ಮ ಬ್ಲಡ್ ಗ್ರೂಪ್ ಯಾವುದು ? ಯಾವ ಬ್ಲಡ್ ಗ್ರೂಪ್ ಹೃದ್ರೋಗದ ಹೆಚ್ಚಿನ ಅಪಾಯವನ್ನು ಹೊಂದಿದೆ?