Aadhaar Update: ಆಧಾರ್ ಹೊಂದಿರುವವರಿಗೆ ಎಚ್ಚರಿಕೆ; ಈ 2 ಕೆಲಸಗಳು ಈ ತಿಂಗಳಲ್ಲಿಯೇ ಪೂರ್ಣಗೊಳಿಸಿ..ಇಲ್ಲದಿದ್ದರೆ ಸಮಸ್ಯೆ..!

Aadhaar Update Aadhaar Update

Aadhaar Update: ಆಧಾರ್ ಕಾರ್ಡ್‌ನ (Aadhaar Card) ಮಹತ್ವವನ್ನು ಹೇಳಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಕಲ್ಯಾಣ ಯೋಜನೆಗಳ ಲಾಭ ಪಡೆಯಲು, ತೆರಿಗೆ ಪಾವತಿಸಲು, ಬ್ಯಾಂಕ್ ಖಾತೆ ತೆರೆಯಲು, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹೀಗೆ ಹಲವು ಕೆಲಸಗಳಿಗೆ ಆಧಾರ್ ಕಾರ್ಡ್ (Aadhaar Card) ಅಗತ್ಯವಿದ್ದು, ಈ ಆಧಾರ್ ಕಾರ್ಡ್ ಇಲ್ಲದಿದ್ದರೆ ತೊಂದರೆಯಾಗುತ್ತದೆ.

Aadhaar Update
Aadhaar Update

ಅದಕ್ಕಾಗಿಯೇ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯ. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಅಂಶವನ್ನು ನಿರ್ಲಕ್ಷಿಸಬಾರದು. ಈಗಿನಿಂದಲೇ ಕೆಲಸವನ್ನು ಪೂರ್ಣಗೊಳಿಸುವುದು ಉತ್ತಮ. ಆಧಾರ್ ಕಾರ್ಡ್ ಹೊಂದಿರುವವರು ಈ ತಿಂಗಳಲ್ಲಿ ಎರಡು ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿದ್ದು, ಏನೆಂದು ಈಗ ನೋಡೋಣ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ರೂ.37ಕ್ಕಿಂತ ಕಡಿಮೆ ಬೆಲೆಗೆ ಅಡುಗೆ ಎಣ್ಣೆ.. ಸರ್ಕಾರದ ಮಹತ್ವದ ನಿರ್ಧಾರ!

Advertisement

ಉಚಿತ ಆಧಾರ್ ನವೀಕರಣ – Free Aadhaar Update

Aadhaar Update
Aadhaar Update

ಆಧಾರ್ ಕಾರ್ಡ್ ಅನ್ನು ನವೀಕರಿಸಲು ಜೂನ್ 14 ಕೊನೆಯ ದಿನಾಂಕವಾಗಿದ್ದು, ನೀವು ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು. ಈ ಕಾರ್ಯವನ್ನು ಆಧಾರ್ ವೆಬ್‌ಸೈಟ್ ಮೂಲಕ ಪೂರ್ಣಗೊಳಿಸಬೇಕು. ಯಾವುದೇ ಶುಲ್ಕವಿಲ್ಲದೆ ವಿವರಗಳನ್ನು ನವೀಕರಿಸಬಹುದು.

ಇದನ್ನು ಓದಿ: ಗುಪ್ತಚರ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 797 ಹುದ್ದೆಗಳಿಗೆ ಅರ್ಜಿ ಅಹ್ವಾನ

ಜೂನ್ 14ರ ನಂತರ ಮತ್ತೆ ಶುಲ್ಕ ವಿಧಿಸಲಾಗುವುದು, ಹಾಗಾಗಿ ಆಧಾರ್ ಕಾರ್ಡ್‌ನಲ್ಲಿ ತಪ್ಪು ವಿವರಗಳನ್ನು ಹೊಂದಿರುವವರು ತಕ್ಷಣವೇ ಆನ್‌ಲೈನ್‌ನಲ್ಲಿ ಉಚಿತವಾಗಿ ವಿವರಗಳನ್ನು ನವೀಕರಿಸಬಹುದು. ಜೂನ್ 14 ರ ನಂತರ ಆಧಾರ್ ನವೀಕರಿಸುವವರು ಶುಲ್ಕವನ್ನು ಪಾವತಿಸಬೇಕು.

ಪ್ಯಾನ್-ಆಧಾರ್ ಲಿಂಕ್ ಡೆಡ್‌ಲೈನ್-Pan-Aadhaar Link Deadline

Aadhaar PAN Link
Aadhaar PAN Link

ಅಲ್ಲದೆ ಆಧಾರ್ ಕಾರ್ಡ್ ಹೊಂದಿರುವವರು ಇನ್ನೊಂದು ಕೆಲಸವನ್ನು ಪೂರ್ಣಗೊಳಿಸಬೇಕು. ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಈ ತಿಂಗಳ ಅಂತ್ಯದೊಳಗೆ ಕೆಲಸ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ. ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಜುಲೈ 1 ರಿಂದ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದ್ದು, ಆಗ ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ.

ಇದನ್ನು ಓದಿ: ಗೃಹಲಕ್ಷ್ಮೀ ಯೋಜನೆಯ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?: ಮಾಹಿಳೆಯರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸಾಮಾನ್ಯವಾಗಿ, ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ (PAN Card Link with Aadhaar Card) ಮಾಡಲು ಗಡುವು 31 ಮಾರ್ಚ್ 2023 ಆಗಿತ್ತು. ಆದರೆ ಅದನ್ನು ಜೂನ್ 30ರವರೆಗೆ ವಿಸ್ತರಿಸಲು ತೀರ್ಮಾನಿಸಲಾಯಿತು. ಈ ಹಿಂದೆ ಹಲವು ಬಾರಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (PAN Card Link with Aadhaar Card) ಗಡುವು ವಿಸ್ತರಣೆ ಮಾಡಲಾಗಿದೆ.

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು, ಹೂಡಿಕೆ ಮಾಡಲು ಸಾಧ್ಯವಿಲ್ಲ. ಈ ರೀತಿಯಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಎರಡನ್ನೂ ತಕ್ಷಣವೇ ಲಿಂಕ್ ಮಾಡಿ.

ಜೂನ್ 30 ರೊಳಗೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ರೂ. 1000 ದಂಡ ಪಾವತಿಸಿ ಈ ಕೆಲಸವನ್ನು ಪೂರ್ಣಗೊಳಿಸಬಹುದಾಗಿದ್ದು, ಪ್ಯಾನ್ ಕಾರ್ಡ್ ಹೊಂದಿರುವವರು ತಕ್ಷಣ ಅದನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ತೊಂದರೆ ಇಲ್ಲ.

English Summary:  Warning for Aadhaar card holders. Deadline for free Aadhaar renewal and pan-Aadhaar linking

ಇದನ್ನು ಓದಿ: RBI ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – RBI Recruitment 2023

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement