ಬೆಂಗಳೂರು: ಕೆಪಿಎಸ್ ಸಿ ಆಯೋಗವು ಪ್ರತೀ ವರ್ಷದಂತೆ ಈ ಬಾರಿಯೂ FDA ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆ ಇಂದೇ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಪ್ರವೇಶ ಪತ್ರ ಡೌನ್ ಲೋಡ್ ಆಗುತ್ತಿಲ್ಲ.
ಆದರೆ ಕೆಪಿಎಸ್ ಸಿ ಆಯೋಗದ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬೆಳಗ್ಗೆಯಿಂದಲೇ ಪ್ರವೇಶ ಪತ್ರ ಡೌನ್ ಲೋಡ್ ಆಗುತ್ತಿಲ್ಲ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂನ ಡಿಗ್ರಿ ಕಾಲೇಜಿನ ಪರೀಕ್ಷಾರ್ಥಿಗಳು ಪ್ರತಿಕ್ರಿಯಿಸಿದ್ದು, ಪರೀಕ್ಷೆಗಾಗಿ 5 ವರ್ಷಗಳಿಂದ ತಯಾರಿ ನಡೆಸಿದ್ದೆವು. ಆದರೆ FDA ಪರೀಕ್ಷೆಗೆ ಪ್ರವೇಶ ಪತ್ರ ಇಲ್ಲದೆ ಪರದಾಡುವಂತಾಗಿದ್ದು, ಇದಕ್ಕೆ ಕೆಪಿಎಸ್ ಸಿ ಆಯೋಗವೇ ಹೊಣೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಬಹುತೇಕ FDA ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡಿದ್ದು, ಇನ್ನು ಅನೇಕ ಅಭ್ಯರ್ಥಿಗಳು ಇಂದು ಪರೀಕ್ಷೆ ಹಿನ್ನಲೆ ಡೌನ್ ಲೋಡ್ ಮಾಡಲು ಪ್ರಯತ್ನಿಸಿದ್ದು, ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಪರೀಕ್ಷೆಗೆ ಪ್ರವೇಶ ಪತ್ರ ದೊರೆತಿಲ್ಲ ಎನ್ನಲಾಗಿದೆ. ಇನ್ನು ಇತ್ತೀಚಿಗೆ FDA ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಮುಂದೂಡಲಾಗಿದ್ದ ಪರೀಕ್ಷೆಯನ್ನು, ಇಂದು FDA ಪರೀಕ್ಷೆ ನಡೆಸಲಾಗುತ್ತಿದೆ.




