ಹರಪನಹಳ್ಳಿ ಮೈಲಾರಲಿಂಗೇಶ್ವರ ಕಾರ್ಣಿಕ: “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್”

ಹರಪನಹಳ್ಳಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಿನ್ನೆ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ಸರಳವಾಗಿ ನಡೆದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಿಲ್ಲನೇರಿದ ಗೋರಪ್ಪ ಅಜ್ಜ “ಭಾಗ್ಯದ ನದಿ ತುಂಬಿ ತುಳಕಿತಲೇ…

mylaralingeshwara vijayaprabha

ಹರಪನಹಳ್ಳಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಿನ್ನೆ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ಸರಳವಾಗಿ ನಡೆದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಿಲ್ಲನೇರಿದ ಗೋರಪ್ಪ ಅಜ್ಜ “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್” ಎಂಬ ವರ್ಷದ ಕಾರ್ಣಿಕ ನುಡಿಯನ್ನು ನುಡಿದಿದ್ದಾನೆ.

ಗೋರಪ್ಪ ಅಜ್ಜ ನುಡಿದ ವರ್ಷದ ಕಾರ್ಣಿಕದಂತೆ, ಈ ಬಾರಿ ಒಳ್ಳೆಯದಾಗಲಿದ್ದು, ಭಾಗ್ಯದ ನದಿ ತುಂಬುತ್ತದೆ ಎಂಬ ಮುನ್ಸೂಚನೆ‌ ನೀಡಿರುವುದರಿಂದ ಒಳ್ಳೆಯ ಮಳೆಯಾಗುತ್ತದೆ ಎಂಬ ಸೂಚನೆ ಸಿಕ್ಕಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.

ಹರಪನಹಳ್ಳಿಯಲ್ಲಿ ಭರತ ಹುಣ್ಣಿಮೆಯ ದಿನದಂದೇ ಮೈಲಾರ ಲಿಂಗೇಶ್ವರ ಜಾತ್ರಾ ನಡೆದಿದ್ದು ಗೋರಪ್ಪ ಅಜ್ಜನಿಂದ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಬಂದಿದ್ದರು. ಭರತ ಹುಣ್ಣಿಮೆಯ ಮೂರನೇ ದಿನದಂದು ಹೂವಿನಹಡಗಲಿ ತಾಲೂಕಿನಲ್ಲಿ ದೊಡ್ಡ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನೆರೆವೇರಲಿದ್ದು ಗೊರವಜ್ಜ ನುಡಿಯುವ ಈ ಕಾರ್ಣಿಕ ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ.

Vijayaprabha Mobile App free

ಇದನ್ನು ಓದಿ: ದೇವರಗುಡ್ಡದ ವರ್ಷದ ಕಾರ್ಣಿಕ: ವ್ಯಾದಿ ಬೂದಿ ಆದಿತಲೆ,ಸೃಷ್ಟಿ ಸಿರಿ ಆಯಿತಲೆ ಪರಾಕ್..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.