ಮಗಳಿಂದಲೇ ತಂದೆ ಹತ್ಯೆಗೆ ಸುಪಾರಿ: ಕೊಚ್ಚಿ ಕೊಲೆಗೈದ ಹಂತಕರು

ಸ್ವಂತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ತಂದೆಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಜಾರ್ಖಂಡ್​ನ ಆದಿತ್ಯಾಪುರ್​​ ಮೂಲದ ಬಿಲ್ಡರ್ ಕನ್ಹಯ್ಯಾ ಸಿಂಗ್ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಇನ್ನು, ಈ ಘಟನೆ ಸಂಬಂಧ ಮಗಳು…

crime vijayaprabha news

ಸ್ವಂತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ತಂದೆಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಜಾರ್ಖಂಡ್​ನ ಆದಿತ್ಯಾಪುರ್​​ ಮೂಲದ ಬಿಲ್ಡರ್ ಕನ್ಹಯ್ಯಾ ಸಿಂಗ್ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ.

ಇನ್ನು, ಈ ಘಟನೆ ಸಂಬಂಧ ಮಗಳು ಅಪರ್ಣಾ ಸಿಂಗ್ ಮತ್ತು ಆಕೆಯ ಗೆಳೆಯ ರಾಜವೀರ್ ಸಿಂಗ್ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಜೂನ್​ 30ರಂದು ನಡೆದಿದ್ದ ಹತ್ಯೆಯ ತನಿಖೆ ನಡೆಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಮಗಳು ಹಾಗೂ ಪ್ರಿಯಕರ ಹತ್ಯೆಗಾಗಿ ಸುಪಾರಿ ನೀಡಿದ್ದರು. ಮೂವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಹತ್ಯೆ ಮಾಡಲಾಗಿತ್ತು.

ಆದರೆ ಈ ಹತ್ಯೆಯೂ ಟೆಂಡರ್ ವಿಚಾರವಾಗಿ ನಡೆದಿದೆ ಎಂದೇ ಶಂಕಿಸಲಾಗಿತ್ತು. ಆದರೆ ಮಗಳಿಗೆ ಮದುವೆಯಾಗಿ ಹುಡುಗನ ಹುಡುಕುತ್ತಿದ್ದ ತಂದೆಗೆ ಆಕೆಯ ಪ್ರೀತಿಯ ವಿಚಾರ ತಿಳಿದು ಗಲಾಟೆ ನಡೆದಿದ್ದು, ಇದರಿಂದ ಕೋಪಗೊಂಡಿದ್ದ ಮಗಳು ತಂದೆಯನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ಸದ್ಯ ಈ ಘಟನೆ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.