Ration card: ರೇಷನ್ ಕಾರ್ಡ್ ತಿದ್ದುಪಡಿಯ ಕೊನೆಯ ದಿನಾಂಕವನ್ನು ಸೆ.೧೪ರ ವರೆಗೆ ವಿಸ್ತರಿಸಲಾಗಿದೆ. ಸೆ. 1 ರಿಂದ 10ವರೆಗೂ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಆದರಿದಿಗ ನಾಲ್ಕು ದಿನ ವಿಸ್ತರಣೆ ಮಾಡಲಾಗಿದೆ. ತಿದ್ದುಪಡಿಗೆ ಅವಕಾಶ ನೀಡಿರುವ ದಿನಗಳಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಮನೆ ಯಜಮಾನರ ಸ್ಥಾನದಲ್ಲಿ ಮಹಿಳೆಯರು ಹೆಸರು ಇಲ್ಲ ಎಂದು ಗೃಹಲಕ್ಷ್ಮೀ ಅರ್ಜಿ ಹಾಕಿಲ್ಲ ಎನ್ನುವವರಿಗೆ ಸದ್ಯ ಅವಕಾಶ ನೀಡಲಾಗಿದ್ದು, ಮಹಿಳೆಯೊಬ್ಬರನ್ನು ಮನೆ ಯಜಮಾನಿ ಎಂದು ತಿದ್ದುಪಡಿ ಮಾಡಬಹುದು.
SAIL Recruitment: ಕೇಂದ್ರ ಸರ್ಕಾರದಲ್ಲಿ 336 ಖಾಲಿ ಹುದ್ದೆಗಳು.. ಅರ್ಹತೆ, ಅರ್ಜಿ ವಿವರಗಳು ಇಲ್ಲಿದೆ!
Ration card: ತಿದ್ದುಪಡಿಗೆ ಮತ್ತೆ ಅವಕಾಶ ವಿಸ್ತರಣೆ
ಈ ಹಿಂದೆಯೇ BPL ತಿದ್ದುಪಡಿಗೆ ಅವಕಾಶ ನೀಡಿದ್ದ ಸರ್ಕಾರ, ಈಗ ಅವಧಿಯನ್ನು ಮತ್ತೆ ವಿಸ್ತರಿಸಿದೆ. ಮೊದಲು ಸರ್ವರ್ ಬ್ಯುಸಿ ಆಗುತ್ತಿದ್ದುದರಿಂದ ತೊಂದರೆಯಾಗಿತ್ತು. ಸದ್ಯ 3 ಹಂತಗಳಲ್ಲಿ ಜಿಲ್ಲಾವಾರು ತಿದ್ದುಪಡಿಗೆ ಅವಕಾಶವಿತ್ತಿದೆ. ಚಿಕ್ಕಬಳ್ಳಾಪುರ ಸೇರಿ ಕೆಲ ಜಿಲ್ಲೆಗಳಲ್ಲಿ ನಾಳೆಯಿಂದ, ಬೆಂಗಳೂರು ನಗರ & ಗ್ರಾಮಾಂತರದಲ್ಲಿ ಸೆ.9ರಿಂದ ತಿದ್ದುಪಡಿ ಮಾಡಿಸಬಹುದಾಗಿದೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ತಿದ್ದುಪಡಿಗೆ ಅವಕಾಶವಿದೆ.
ರೇಷನ್ ಕಾರ್ಡ್ ತಿದ್ದುಪಡಿ ಹೇಗೆ?
ಕಾರ್ಡ್ ತಿದ್ದುಪಡಿಗೆ ಸೆಪ್ಟೆಂಬರ್ 1 ರಿಂದ 10ವರೆಗೂ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಆದರೆ, ಆ ಅವಧಿಯನ್ನು ನಾಲ್ಕು ದಿನಗಳ ಮಟ್ಟಿಗೆ ವಿಸ್ತರಣೆ ಮಾಡಲಾಗಿದೆ. ಈ ಕ್ರಮದಿಂದಾಗಿ ಸಾಕಷ್ಟು ಅನುಕೂಲವಾಗಲಿದೆ. ತಿದ್ದುಪಡಿಗೆ ಅವಕಾಶ ನೀಡಿರುವ ದಿನಗಳಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಪಂ ಕಚೇರಿ, ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Subsidy: ವಾಹನ ಖರೀದಿದಾರರಿಗೆ ಭರ್ಜರಿ ಸುದ್ದಿ; ಟ್ಯಾಕ್ಸಿ ಖರೀದಿಗೆ 3 ಲಕ್ಷ, ಆಟೋ ರಿಕ್ಷಾ ಖರೀದಿಗೆ 75 ಸಾವಿರ ಸಹಾಯಧನ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |