Equity Mutual Fund | ಈಕ್ವಿಟಿ ಫಂಡ್‌ ಎಂದರೇನು? ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಯೋಜನಗಳೇನು

Equity Mutual Fund : ಈಕ್ವಿಟಿ ಫಂಡ್‌ (Equity Fund) ಎಂಬುದು ಮ್ಯೂಚುವಲ್‌ ಫಂಡ್‌ (Mutual Fund) ಸ್ಕೀಮ್ ಆಗಿದ್ದು, ಇದು ಮುಖ್ಯವಾಗಿ ಕಂಪನಿಗಳ ಷೇರುಗಳು (Company Shares) ಅಥವಾ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತದೆ.…

Equity Mutual Fund

Equity Mutual Fund : ಈಕ್ವಿಟಿ ಫಂಡ್‌ (Equity Fund) ಎಂಬುದು ಮ್ಯೂಚುವಲ್‌ ಫಂಡ್‌ (Mutual Fund) ಸ್ಕೀಮ್ ಆಗಿದ್ದು, ಇದು ಮುಖ್ಯವಾಗಿ ಕಂಪನಿಗಳ ಷೇರುಗಳು (Company Shares) ಅಥವಾ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಇವುಗಳನ್ನು ಗ್ರೋತ್ ಫಂಡ್‌ಗಳು (Growth Fund) ಎಂದೂ ಸಹ ಕರೆಯಲಾಗುತ್ತದೆ.

ಈಕ್ವಿಟಿ ಫಂಡ್‌ಗಳು ಆಕ್ಟಿವ್ ಅಥವಾ ಪ್ಯಾಸಿವ್‌ ಫಂಡ್‌ಗಳಾಗಿರುತ್ತವೆ. ಒಂದು ಆಕ್ಟಿವ್‌ ಫಂಡ್‌ನಲ್ಲಿ ಫಂಡ್‌ ಮ್ಯಾನೇಜರ್‌ ಮಾರ್ಕೆಟ್‌ ಅನ್ನು ಸ್ಕ್ಯಾನ್ ಮಾಡಿ ಕಂಪನಿಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ. ಅವುಗಳ ಪರ್ಫಾರ್ಮೆನ್ಸ್ ಅನ್ನು ಪರಿಶೀಲಿಸಿ ಹೂಡಿಕೆ ಮಾಡಲು ಉತ್ತಮ ಸ್ಟಾಕ್‌ಗಳನ್ನು ಕಂಡುಕೊಳ್ಳುತ್ತಾರೆ.

Equity Mutual Fund : ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು?

ಈಕ್ವಿಟಿ ಮ್ಯೂಚುವಲ್ ಫಂಡ್(Equity Mutual Fund) ಗಳು ಹೂಡಿಕೆದಾರರಿಗೆ ಭವಿಷ್ಯದಲ್ಲಿ ತಮ್ಮ ಸಂಪತ್ತಿನ ಮೌಲ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇವು ದೀರ್ಘಾವಧಿಯ ಹೂಡಿಕೆಗಳಾಗಿರುವುದರಿಂದ ಸುಲಭ ಮತ್ತು ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಪ್ರಮುಖ ಪ್ರಯೋಜನವೆಂದರೆ ಅವು ಅಪಾಯದ ವೈವಿಧ್ಯತೆಯನ್ನು ಖಚಿತಪಡಿಸುತ್ತವೆ, ಅಂದರೆ ನಿಮ್ಮ ಹಣವು ವಿವಿಧ ಕ್ಷೇತ್ರಗಳಲ್ಲಿ ಹರಡಿದ್ದು ಒಂದು ವಲಯವು ಕುಸಿದರೆ, ಇತರ ಕ್ಷೇತ್ರಗಳ ಮೂಲಕ ಸಂಪತ್ತನ್ನು ಗಳಿಸಲು ನಿಮಗೆ ಅವಕಾಶ ಒದಗಿಸುತ್ತದೆ.

Vijayaprabha Mobile App free

ಇದನ್ನೂ ಓದಿ: ಯುನಿಟ್ ಲಿಂಕ್ಡ್ ವಿಮಾ ಯೋಜನೆ ವಿಧಗಳು, ತೆರಿಗೆ ಪ್ರಯೋಜನಗಳು

Equity Mutual Fund : ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಸಿಗುವ ಪ್ರಯೋಜನಗಳು

ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಉಳಿತಾಯ ಖಾತೆಗಳು ಅಥವಾ ಬಾಂಡ್ ಗಳಿಗೆ ಹೋಲಿಸಿದರೆ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಹೆಚ್ಚಿನ ಆದಾಯವನ್ನು ಹೊಂದಿವೆ. ಒಂದು ಈಕ್ವಿಟಿ ಫಂಡ್ (Equity Fund) ವಿವಿಧ ಕೈಗಾರಿಕೆಗಳಲ್ಲಿನ ಅನೇಕ ಕಂಪನಿಗಳ ಷೇರುಗಳನ್ನು ಹೊಂದಿರುತ್ತದೆ. ಆಂತರಿಕ ವೈವಿಧ್ಯೀಕರಣವು ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಯಾವುದೇ ಒಂದು ಸ್ಟಾಕ್ ನಿಂದ ಕೆಟ್ಟ ಕಾರ್ಯಕ್ಷಮತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇಎಲ್ಎಸ್ಎಸ್ ನಂತಹ ಫಂಡ್ ಗಳು ತೆರಿಗೆ ಪ್ರಯೋಜನ (Tax Benefits) ನೀಡುತ್ತವೆ.

ಇದನ್ನೂ ಓದಿ: ಮಹಿಳೆಯರಿಗಾಗಿ ಸರ್ಕಾರದ ತಾಯಿ ಭಾಗ್ಯ ಯೋಜನೆ; ಸೌಲಭ್ಯಗಳು, ಅರ್ಜಿ ಸಲ್ಲಿಕೆ

ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು

Equity Fund

ಈಕ್ವಿಟಿ ಫಂಡ್ ಗಳಲ್ಲಿ (Equity Fund) ಹೂಡಿಕೆ ಮಾಡುವ ಮೊದಲು, ಪ್ರತಿಯೊಂದು ಫಂಡ್ ಗಳು ವಿಶಿಷ್ಟ ಹೂಡಿಕೆ ಗುರಿಗಳು ಮತ್ತು ಅಪಾಯಗಳನ್ನು ಹೊಂದಿರುತ್ತದೆ ಎಂಬುದನ್ನು ತಿಳಿದಿರಬೇಕು. ದೀರ್ಘಾವಧಿಯ ಆದಾಯಕ್ಕಾಗಿ, ಕಳೆದ ವರ್ಷಗಳಲ್ಲಿ ತಮ್ಮ ಮಾನದಂಡಗಳನ್ನು ನಿರಂತರವಾಗಿ ಮೀರಿಸಿದ ಫಂಡ್ ಗಳನ್ನು ಆರಿಸಿ. ಹಿಂದಿನ ಆದಾಯ ಪರಿಗಣಿಸುವಾಗ, ಅವು ಭವಿಷ್ಯದ ಆದಾಯವನ್ನು ಊಹಿಸುವುದಿಲ್ಲ ಆದರೆ ನಿರ್ದಿಷ್ಟ ಹೂಡಿಕೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಲಾಗಿದೆ ಎಂಬುದನ್ನು ತೋರಿಸಬಹುದು. ಇವುಗಳನ್ನು ಮಾರ್ಕೆಟ್ ಬಂಡವಾಳೀಕರಣದ ಆಧಾರದಲ್ಲೂ ವಿಭಜಿಸಬಹುದು.

ಇದನ್ನೂ ಓದಿ: Fastest internet | ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಸ್ಪೀಡ್ ಹೊಂದಿರುವ ರಾಷ್ಟ್ರಗಳು

ಹೂಡಿಕೆ ಮಾಡಲು ಉತ್ತಮ ಇಕ್ವಿಟಿ ಫಂಡ್ ಅನ್ನು ಆಯ್ಕೆ ಮಾಡುವುದು ಹೇಗೆ?

ಹೂಡಿಕೆಗಾಗಿ ಈಕ್ವಿಟಿ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವಾಗ, ಹೂಡಿಕೆದಾರರು ತಮ್ಮ ಹೂಡಿಕೆಯ ಗುರಿಗಳು ಮತ್ತು ಅವರು ಈಕ್ವಿಟಿ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಲು ನೋಡುತ್ತಿದ್ದಾರೆ ಎಂಬ ಉದ್ದೇಶವನ್ನು ಪರಿಗಣಿಸಬೇಕು. ತಮ್ಮ ಹೂಡಿಕೆ ಪ್ರೊಫೈಲ್ ಗಾಗಿ ಎಷ್ಟು ಮಾರುಕಟ್ಟೆ ಅಪಾಯವನ್ನು ತೆಗೆದುಕೊಳ್ಳಬಹುದು ಎಂದು ಫಂಡ್ ಮ್ಯಾನೇಜರ್ ನ ಹಿಂದಿನ ಕಾರ್ಯಕ್ಷಮತೆಯ ಬಗ್ಗೆ ಸ್ಪಷ್ಟ ಸಂಶೋಧನೆ ನಡೆಸುವುದು ಅತ್ಯಗತ್ಯ.
ಕೃಪೆ: Masth Magaa

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply