Ration card : ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಿಗೆ ಪಡಿತರ ಚೀಟಿ (Ration card) ತುಂಬಾನೇ ಮುಖ್ಯವಾದ ದಾಖಲೆಯಾಗಿವೆ.
ಹೌದು, ಪಡಿತರ ಚೀಟಿಯಲ್ಲಿ ಪತ್ನಿ, ಮಕ್ಕಳ ಹೆಸರು ಸೇರಿಸಲು ಕೆಲವು ದಾಖಲೆಗಳು ಕಡ್ಡಾಯವಾಗಿದ್ದು, ಪಡಿತರ ಚೀಟಿಯಲ್ಲಿ ಪತ್ನಿ, ಮಕ್ಕಳ ಹೆಸರು ಸೇರಿಸಲು ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಇದನ್ನೂ ಓದಿ: Adike Rate Today | ಇಂದಿನ ಅಡಿಕೆ ರೇಟ್ | ಮಾರುಕಟ್ಟೆ ವಿವರ
ಇನ್ನು, ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಹೆಂಡತಿಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗಿದ್ದು, ಈ ಎರಡು ದಾಖಲೆಗಳು ಇದ್ದರೆ ನೀವು ಆನ್ಲೈನ್ ಮುಖಾಂತರ ರೇಷನ್ ಕಾರ್ಡ್ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು.
Ration card : ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ ಮಾಡುವುದು ಹೇಗೆ ಗೊತ್ತೇ?
- ಇನ್ನು, ಈ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಬಯಸುವರು, ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ https://ahara.kar.nic.in/home ಭೇಟಿ ನೀಡಬೇಕು.
- ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ.
- ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ, ಸಬ್ಮೀಟ್ ಕೊಡಿ.
- ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿ ನೀಡಲಾಗುತ್ತದೆ.