ಮುಂಬೈ: ಗ್ರೇಟರ್ ನೋಯ್ಡಾದಲ್ಲಿ ಗೂಗಲ್ ಮ್ಯಾಪನ್ನು ನಂಬಿ ಕಾರು ಚಲಾಯಿಸಿಕೊಂಡು ಹೋದ ಪರಿಣಾಮ 30 ಅಡಿ ಆಳದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್ ಭಾಟಿ ಎಂದು ಗುರುತಿಸಲಾಗಿದೆ. ಇವರು ಜಿಪಿಎಸ್ ಸಾಧನವನ್ನು ಆಧರಿಸಿ ಕಾರು ಚಲಾಯಿಸುತ್ತಿದ್ದರು.
ಭಾಟಿ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ನಲ್ಲಿ ಗ್ರೇಟರ್ ನೋಯ್ಡಾದ ಉಪನಗರವಾದ ಕಸ್ನಾ ಕಡೆಗೆ ಹೋಗುತ್ತಿದ್ದಾಗ ಕಾರು ಏಕಾಏಕಿ ಚರಂಡಿಯಲ್ಲಿ ಬಿದ್ದಿದೆ. ಆತ ತನ್ನ ಸ್ಥಳಕ್ಕೆ ಹೋಗಲು ಗೂಗಲ್ ಮ್ಯಾಪ್ ಬಳಸುತ್ತಿದ್ದ ಎಂದು ವರದಿಯಾಗಿದೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಲು ಸ್ಥಳದಲ್ಲಿ ಎಚ್ಚರಿಕೆ ಸೂಚನಾ ಫಲಕ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಭವಿಷ್ಯದಲ್ಲಿ ಅಪಾಯದ ಬಗ್ಗೆ ತಿಳಿಸುವ ಬ್ಯಾರಿಕೇಡ್ಗಳು ಅಥವಾ ಸೈನ್ಬೋರ್ಡ್ಗಳನ್ನು ಹಾಕುವಂತೆ ಅವರು ಅಧಿಕಾರಿಗಳನ್ನು ವಿನಂತಿಸಿದರು.