ಕುಣಿಗಲ್: ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ರಾಜ್ಯ ಹೆದ್ದಾರಿ 33, T.M ರಸ್ತೆಯ ಹುಲಿಯೂರುದುರ್ಗ ಹೋಬಳಿ ಕಂಪಲಾಪುರ ಗ್ರಾಮದಲ್ಲಿ ಸೋಮವಾರ (ಫೆಬ್ರವರಿ 17) ಬೆಳಿಗ್ಗೆ ಈ ಘಟನೆ ಸಂಭವಿಸಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗುಳೆದಗುಡ್ಡ ಗ್ರಾಮದ ಕಸ್ತೂರಿ(43) ಮೃತ ಮಹಿಳೆಯಾಗಿದ್ದಾರೆ. ಆಕೆಯ ಪತಿ, ಕಾರು ಚಾಲಕ ಬಸವರಾಜು ಮತ್ತು ಶಾಂತಮ್ಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನ ಬಿಇಎಂಎಲ್ ಇಂಡಿಯಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ರಜಾ ದಿನವಾಗಿರುವುದರಿಂದ, ಅವರು ಬಾದಾಮಿ ತಾಲ್ಲೂಕಿನ ತಮ್ಮ ತವರು ಗುಳೆದಗುಡ್ಡ ಗ್ರಾಮಕ್ಕೆ ತೆರಳಿದ್ದರು. ಮತ್ತು ಸೋಮವಾರ ಕೆಲಸಕ್ಕಾಗಿ ಮೈಸೂರಿಗೆ ಮರಳುತ್ತಿದ್ದರು.
ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.