ರಾಂಚಿ: ಆಲೂಗಡ್ಡೆ ತುಂಬಿದ ಟ್ರಕ್ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಮೇಲೆ ಪಲ್ಟಿ ಹೊಡೆದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಮಗಢದ ಗೋಲಾದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದಲ್ಲಿ ಆಟೋ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಎಲ್ಲಾ ಮಕ್ಕಳು ಗುಡ್ವಿಲ್ ಮಿಷನ್ ಶಾಲೆಯಲ್ಲಿ ಓದುತ್ತಿರುವ 6 ರಿಂದ 8 ವರ್ಷದೊಳಗಿನವರಾಗಿದ್ದರು.
ಗಮನಾರ್ಹವಾಗಿ, ದೇಶದ ವಾಯುವ್ಯ ದಿಕ್ಕಿನಿಂದ ಜಾರ್ಖಂಡ್ ಕಡೆಗೆ ನಿರಂತರವಾಗಿ ಬೀಸುವ ತಂಪಾದ ಗಾಳಿಯ ಪರಿಣಾಮದಿಂದಾಗಿ, ರಾಜ್ಯ ಸರ್ಕಾರವು ಜನವರಿ 13 ರವರೆಗೆ ನರ್ಸರಿಯಿಂದ 8 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತ್ತು. ಇದರ ಹೊರತಾಗಿಯೂ, ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು.