Jan Dhan Scheme: 10 ಸಾವಿರ ರೂ ಪಡೆಯಲು ಈ ಕೆಲಸ ಮಾಡಿ…!

ದೇಶದ ಪ್ರತಿ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಜನ್ ಧನ್ ಯೋಜನೆ’ಯನ್ನು ಆರಂಭಿಸಿತು.…

Jan Dhan Scheme

ದೇಶದ ಪ್ರತಿ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಜನ್ ಧನ್ ಯೋಜನೆ’ಯನ್ನು ಆರಂಭಿಸಿತು.

ಈ ಜನ್ ಧನ್ ಖಾತೆದಾರರಿಗೆ ಸರ್ಕಾರ 10 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದು, ಇದಕ್ಕಾಗಿ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಗಳ ಬಗ್ಗೆ ತಿಳಿದಿಲ್ಲದಿದ್ದರೆ ಈ ಕುರಿತಂತೆ ಇಲ್ಲಿದೆ ಮಾಹಿತಿ ನೋಡಿ

ಶೂನ್ಯ ರೂ.ಗಳಲ್ಲಿ ಖಾತೆ ತೆರೆಯಿರಿ :

Vijayaprabha Mobile App free

ಖಾತೆದಾರರು ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಶೂನ್ಯ ರೂ.ಗಳಲ್ಲಿ ತೆರೆಯಬಹುದಾದ ಖಾತೆ ಆಗಿದೆ. ಇದಲ್ಲದೇ, ಜನ್ ಧನ್ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತಿದ್ದು, ಖಾತೆದಾರರು ಬಯಸಿದರೆ, ನೀವು ಬ್ಯಾಂಕ್ ಗೆ ಅರ್ಜಿ ಸಲ್ಲಿಸುವ ಮೂಲಕ ಈ ಖಾತೆಯಲ್ಲಿ 10,000 ರೂ.ಗಳ ಓವರ್‌ಡ್ರಾಫ್ಟ್ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು.

ಜನ್ ಧನ್ ಖಾತೆಯಲ್ಲಿ ವಿಮೆ ಕೂಡ ಲಭ್ಯ:

ಜನ್ ಧನ್ ಖಾತೆದಾರರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಖಾತೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮೆ ಸೌಲಭ್ಯವೂ ಸೇರಿದ್ದು, 30 ಸಾವಿರ ರೂಪಾಯಿಗಳ ಜೀವ ವಿಮಾ ರಕ್ಷಣೆಯನ್ನೂ ನೀಡಲಾಗುತ್ತದೆ.

ಖಾತೆದಾರರು ಅಪಘಾತದಲ್ಲಿ ಮೃತಪಟ್ಟರೆ, ಆ ಖಾತೆದಾರರ ಕುಟುಂಬಕ್ಕೆ 1 ಲಕ್ಷ ರೂಪಾಯಿ ವಿಮಾ ರಕ್ಷಣೆ ನೀಡಲಾಗುವುದಲ್ಲದೆ, ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ 30,000 ರೂಪಾಯಿಗಳ ವಿಮಾ ರಕ್ಷಣೆಯ ಮೊತ್ತವನ್ನು ನೀಡಲಾಗುತ್ತದೆ.

ಜನ್ ಧನ್ ಖಾತೆಯನ್ನು ತೆರೆಯುವುದು ಹೇಗೆ?

ಜನ್ ಧನ್ ಖಾತೆಯನ್ನು ತ ತೆರೆಯಲು ಹತ್ತಿರದ ಬ್ಯಾಂಕ್ ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು ಈ ಫಾರ್ಮ್ ನಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ, ಮತ್ತು ವಾರ್ಷಿಕ ಆದಾಯ, ಅವಲಂಬಿತರ ಸಂಖ್ಯೆ, ವಾರ್ಡ್ ಸಂಖ್ಯೆ, ಗ್ರಾಮ ಕೋಡ್, ಟೌನ್ ಕೋಡ್, ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. 10 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರ ಹೆಸರಿನಲ್ಲಿ ಈ ಖಾತೆ ತೆರೆಯಬಹುದು.

ಖಾತೆ ತೆರೆಯಲು ಏನೆಲ್ಲಾ ಬೇಕು?

ನೀವು ಸಹ ಈ ಯೋಜನೆಗಳ ಲಾಭವನ್ನು ಪಡೆಯಲು ಬಯಸಿದರೆ ಇದಕ್ಕಾಗಿ, ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ, ನರೆಗಾ ಜಾಬ್ ಕಾರ್ಡ್, ಗೆಜೆಟೆಡ್ ಆಫೀಸರ್ ಮೂಲಕ ಜಾರಿ ಮಾಡಲಾದ ಲೆಟರ್, ಈ ದಾಖಲೆಗಳು ಜನ್ ಧನ್ ತೆರೆಯುವ ಸಂದರ್ಭದಲ್ಲಿ ಅಗತ್ಯವಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.